ಮೂಡಿಗೆರೆ ತಾಲ್ಲೂಕು ಯು. ಹೊಸಹಳ್ಳಿ ಗ್ರಾಮದ ಶ್ರೀ ಗುಡ್ಡದ ಭೈರವೇಶ್ವರ ಹಾಗೂ ಉಪದೇವತೆಗಳ ಅಷ್ಠಬಂಧ ಬ್ರಹ್ಮ ಕಲಶೋತ್ಸವ
ಕಾರ್ಯಕ್ರಮ ಮಾರ್ಚ್ 4 ಮತ್ತು 5 ರಂದು ವಿಜೃಂಭಣೆಯಿಂದ ನೆರವೇರಿತು.
ಮಾರ್ಚ್ 4 ರಂದು ಬುಧವಾರ ಸಂಜೆ
5-30 ರಿಂದ ಆಲಯ ಪರಿಗ್ರಹ, ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ದಿಕ್ಷಾಲಕಬಲಿ, ರಕ್ಷೆ, ಪ್ರಸಾದ ವಿನಿಯೋಗ ನೆರವೇರಿತು.
ದಿನಾಂಕ : 05-03-2026ನೇ ಗುರುವಾರ ಗಣಯಾಗ, ಪ್ರತಿಷ್ಠಾಯಾಗ,
ಬ್ರಹ್ಮಕಲಶ ಪೂಜೆ, ದೇವರಿಗೆ ಅಷ್ಠಬಂಧ ಲೇಪನದ ನಂತರ ಬೆಳಿಗ್ಗೆ 11-35ರ ವೃಷಭ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿನಿಯೋಗ ನೆರವೇರಿತು.
ಈ ಎಲ್ಲಾ ಕಾರ್ಯಗಳು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರು ಇವರ ನೇತೃದಲ್ಲಿ ನೆರವೇರಿಸಲಾಯಿತು.
ಯು.ಹೊಸಹಳ್ಳಿ ಹಾಗೂ ಊರುಬಗೆ ಸಾವಿರದ ಹದಿಮೂರು ಗ್ರಾಮದ ಗ್ರಾಮಸ್ಥರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಂದಿ ಈ ಧಾರ್ಮಿಕ
ಕಾರ್ಯದಲ್ಲಿ ಭಾಗಿಯಾಗಿದ್ದರು.
ದೇವಸ್ಥಾನ ಸಮಿತಿಯ ಅಧ್ಯಕ್ಷರು,
ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.
No comments:
Post a Comment