ಅನುದಾನ ರಹಿತ ಶಾಲೆಗಳಿಗೆ ಸ್ಯಾಟ್ಸ್ ಪ್ರಕಾರವಾಗಿ ಪಠ್ಯಪುಸ್ತಕಗಳ ನ್ನು ಖರೀದಿಸುವುದು ಆಡಳಿತ ಮಂಡಳಿಗೆ ತೀವ್ರ ಆರ್ಥಿಕ ಹೊರೆಯಾಗುತ್ತಿದ್ದು ಈ ಸಮಸ್ಯೆ ಬಗ್ಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಜಿಲ್ಲಾ ಖಾಸಗೀ ಅನುದಾನ ರಹಿತ ಶಾಲೆಗಳ ಒಕ್ಕೂಟ ಪದಾಧಿಕಾ ರಿಗಳು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಶಾಲೆಗಳಲ್ಲಿ ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಪಠ್ಯಪುಸ್ತಕಗಳನ್ನು ಸಂಗ್ರಹಿಸಿ ಅವುಗಳನ್ನು ಈ ಸಾಲಿನ ಬಡ ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆಯಿರುವುದರಿಂದ ಸ್ಯಾಟ್ಸ್ ಪ್ರಕಾರವಾಗಿ ಪಠ್ಯಪುಸ್ತಕಗಳನ್ನು ಖರೀದಿಸುವುದು ಆಡಳಿತ ಮಂಡಳಿಗೆ ಆರ್ಥಿಕ ಹೊರೆಯಾಗಿದೆ ಎಂದು ತಿಳಿಸಿದರು.
ಶೇ.25 ರಷ್ಟು ಮುಂಗಟ ಹಣ ಫಾವತಿಸುವುದು ಕೂಡಾ ಕಷ್ಟವಾಗುತ್ತದೆ. ಅನುದಾನ ರಹಿತ ಶಾಲೆಗಳಿ ಗೆ ವರ್ಷದ ಕೊನೆಯಲ್ಲಿ ಇಷ್ಟು ಹಣವನ್ನು ಒಟ್ಟಿಗೆ ಪಾವತಿಸುವುದು ಕಷ್ಟ ಸಾಧ್ಯವಾಗಿದೆ. ಈಗಾಗಲೇ ಅನು ದಾನ ರಹಿತ ಮಕ್ಕಳಿಗೂ ಪಠ್ಯಪಸ್ತಕಗಳನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಬೇಕು. ಸರ್ಕಾರಿ ಮತ್ತು ಖಾಸಗೀ ಶಾಲೆಯ ಮಕ್ಕಳೆಲ್ಲರೂ ಮಕ್ಕಳೆಂದು ಪರಿಗಣಿಸಬೇಕು ಎಂದರು.
ಜಿಲ್ಲೆಯ ಬಹಳಷ್ಟು ಶಾಲೆಗಳಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಆರ್‍ಟಿಇ ಹಣವು ಬಾಕಿ ಉಳಿಸಿ ಕೊಂಡಿದೆ. ಖಾಸಗೀ ಶಾಲೆಗಳನ್ನು ಆರ್ಥಿಕ ಸಮಸ್ಯೆಗಳಿಗೆ ದೂಕಿರುವುದಲ್ಲದೇ ಅಭಿವೃದ್ದಿ ಕಾರ್ಯಗಳು ಸ್ಥ ಗಿತಗೊಂಡಿವೆ. ಆದ್ದರಿಂದ ಸಣ್ಣಪುಟ್ಟ ನೆಪಗಳನ್ನು ನೀಡಿ ಆರ್‍ಟಿಇ ಕಂತುಗಳನ್ನು ಅನುದಾನ ರಹಿತ ಶಾಲೆ ಳಿಗೆ ಕೂಡಲೇ ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ತಿಳಿಸಿದರು.
ಅನುದಾನ ರಹಿತ ಶಾಲೆಗಳ ನವೀಕರಣದ ಬಗ್ಗೆ ಬಹಳಷ್ಟು ಗೊಂದಲವಿದ್ದು ಪದೇ ಪದೇ ಇಲಾಖೆ ಯಿಂದ ಅರ್ಜಿಗಳು ತಿರಸ್ಕøತವಾಗುತ್ತಿವೆ. ಮುಖ್ಯವಾಗಿ ಎಸ್.ಎಸ್.ಎಲ್.ಸಿ. ಬೋರ್ಡ್ ಪರೀಕ್ಷೆ ತೆಗೆದುಕೊ ಳ್ಳುವ ಮಕ್ಕಳ ಬಗ್ಗೆ ಅತ್ಯಂತ ಆತಂಕ ಉಂಟಾಗಿದೆ ಎಂದರು.
ಪ್ರಸ್ತತು ಇಲಾಖೆ ನಿಬಂಧನೆಯ ಪ್ರಕಾರ ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಅಫಿಡವಿಟ್ ಮುಂಜಾಗ್ರತಾ ಕ್ರಮಗಳನ ನಿಬಂಧನೆಗಳನ್ನು ಪೂರೈಸಲಾಗಿದ್ದರೂ ಆಡಳಿತ ಮಂಡಳಿಯು ಶಾಲೆಗೆ ನೀಡಿರುವ ಕಟ್ಟಡ ಮ ತ್ತು ನಿವೇಶನದ ಒಪ್ಪಂದ ಪತ್ರವನ್ನು 30 ವರ್ಷಗಳಿಗೆ ರಿಜಿಸ್ಟಾರ್ ನೋಂದಾಯಿಸಿಬೇಕೆನ್ನುವ ನಿಬಂಧನೆ ಕೈಬಿಟ್ಟು ಅಥವಾ ರಿಯಾಯಿತಿ ನೀಡಿ ಬಹಳ ವರ್ಷಗಳಿಂದ ದಕ್ಷತೆಯಿಮದ ನಡೆಯುತ್ತಿರುವ ಶಾಲೆಗಳಿಗೆ 10 ವರ್ಷಗಳ ಮಾನ್ಯತೆ ನವೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಷಡಕ್ಷರಿ, ಕಾರ್ಯದರ್ಶಿ ನಂದಕು ಮಾರ್, ಸಹ ಕಾರ್ಯದರ್ಶಿ ಸಿ.ಹೆಚ್.ಶ್ರೀನಿವಾಸ್, ಖಜಾಂಚಿ ಶರತ್‍ಕುಮಾರ್, ಸದಸ್ಯರುಗಳಾದ ನಿರ್ಮ ಲ ಬೆನನ್, ಸಾವಿತ್ರಿ, ಮಂಜೇಗೌಡ, ಮುಂತಾದವರು. ಹಾಜರಿದ್ದರು.
No comments:
Post a Comment