Monday, 2 March 2026

ಭಗವಾನ್ ಶ್ರೀಸತ್ಯಸಾಯಿ ಬಾಬಾರ ಅವತರಣ ಶತಮಾನೋತ್ಸವ ಸಂಭ್ರಮ : ಚಿಕ್ಕಮಗಳೂರು ನಗರದಲ್ಲಿ ಪ್ರೇಮವಾಹಿನಿ ರಥ ಭವ್ಯಮೆರವಣಿಗೆ


ಪ್ರೇಮ ಮತ್ತು ಕರುಣೆಯಿಂದ ಸೇವೆ ಮಾಡಿದರೆ ಅದು ಪೂಜೆಗೆ ಸಮ ಎಂಬುದು ಶ್ರೀಸತ್ಯ ಸಾಯಿಬಾಬಾ ಅವರ ನಂಬಿಕೆಯಾಗಿತ್ತು ಎಂದು ಕರ್ನಾಟಕ ರಾಜ್ಯ ಸೇವಾಸಂಸ್ಥೆಗಳ ಅಧ್ಯಕ್ಷ ಮಂಗಳೂರಿನ ಎಂ.ಪದ್ಮನಾಭಪೈ ನುಡಿದರು.

ಭಗವಾನ್ ಶ್ರೀಸತ್ಯಸಾಯಿ ಬಾಬಾರ ಅವತರಣ ಶತಮಾನೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ಆಯೋಜಿಸಿರುವ ಶ್ರೀಸತ್ಯಸಾಯಿ ಪ್ರೇಮವಾಹಿನಿ ರಾಷ್ಟ್ರೀಯ ರಥಯಾತ್ರೆ ಚಿಕ್ಕಮಗಳೂರು  ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಗೃಹಮಂಡಳಿ ಚಂದ್ರಪ್ರಭ ಬಡಾವಣೆಯ ಟಿಪಿಬಿ ಭಜನಾಕೇಂದ್ರದಲ್ಲಿ ಆಯೋಜಿಸಿದ್ದ ಸತ್ಸಂಗದಲ್ಲಿ ಅವರು ಉಪನ್ಯಾಸ ನೀಡಿದರು.

Ëತಿಕವಾಗಿ ಬಾಬಾಅವರು ನಮ್ಮೊಂದಿಗೆ ಇಲ್ಲದಿದ್ದರೂ ಅನುಭವದ ಮೂಲಕ ನಮ್ಮೆಲ್ಲರ ಒಡನಾಟದಲ್ಲಿ ಈಗಲೂ ಮಾರ್ಗದರ್ಶನದೊಂದಿಗೆ ರಕ್ಷಿಸುತ್ತಿದ್ದಾರೆ.  ಅವರ ಸಂದೇಶಗಳು ಮನುಕುಲದ ಒಳಿತಿಗೆ ಇದೆ.  ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತರಾಗದೆ ಅವರವರ ಆಚರಣೆಗಳ ಮೂಲಕ ಸೌಹಾರ್ದತೆಯಿಂದ ಬಾಳುವುದನ್ನು ಕಲಿಸಿದವರು. ನೂರಾರುದೇಶಗಳಲ್ಲಿ ಭಕ್ತರು ಮಂದಿರ-ಸೇವಾಕ್ಷೇತ್ರದ ಮೂಲಕ ಬಾಬಾರನ್ನು ನಿತ್ಯ ಕಾಣುತ್ತಿದ್ದಾರೆಂದರು.

ಕರುಣಾಮಯಿ-ಪ್ರೇಮಮಯಿಯಾಗಿ 85ವರ್ಷಗಳ ಅವರ ಜೀವಾವಧಿ ಹಲವು ವಿಸ್ಮಯಗಳ ಆಗರ, ಸಂದೇಶಗಳ ಸಾಗರ.  ಅವರ್ಣನೀಯ ನಿಸ್ವಾರ್ಥಪ್ರೇಮ ಮತ್ತು ಆದರ್ಶಮಯ ಜೀವನದ ಮೂಲಕ ಕೋಟ್ಯಾಂತರ ಭಕ್ತರ ಆರಾಧ್ಯದೈವರಾಗಿ ಪೂಜ್ಯನೀಯರಾಗಿರುವ ಭಗವಾನ್ಬಾಬಾ ಸಾರ್ವಜನಿಕ ಸೇವೆಗೊಂದು ನಿದರ್ಶನ ಎಂದರು.

ಅಖಂಡಪ್ರೀತಿ-ನಂಬಿಕೆ ಭಾವಪೂರ್ಣವಾಗಿ ನಂಬಿದವರ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸೂಚಿಸುವ ಅವರು, ಫಲಿತಾಂಶಕ್ಕಿಂತ ಉದ್ದೇಶ ಮುಖ್ಯ.  ಪರಿಶುದ್ಧತೆಯಲ್ಲಿ ಸೇವೆಯನ್ನು ಅಳೆಯಲಾಗದೆಂದಿದ್ದಾರೆ. 

ಕರ್ತವ್ಯ ಮತ್ತು ಮಾಲಿಕತ್ವವನ್ನು ಮರೆಯಬೇಕು.  ಸಾಮಥ್ರ್ಯಕ್ಕಿಂತ ಲಭ್ಯತೆ ಮುಖ್ಯ ಎಂಬುದನ್ನು ಅರಿಯಬೇಕು.  ಮೊದಲು ಸ್ವಂತದವರ ಸೇವೆ ಮಾಡಿ ಗೆದ್ದು ಆನಂತರ ಸಾರ್ವಜನಿಕರ ಸೇವೆಗೆ ಮುಂದಾಗಬೇಕೆಂಬುದು ಬಾಬಾರ ಉಪದೇಶವಾಗಿತ್ತೆಂದರು.

ಸೇವೆ ಅಥವಾ ಇನ್ನಿತರ ಕಾರ್ಯಮಾಡುವಾಗ ಇತರರನ್ನು ಅನುಸರಿಸುವ ಅಗತ್ಯವಿಲ್ಲ.  ನಮ್ಮ ಸಾಮಥ್ರ್ಯಕ್ಕೆ ನಮ್ಮದೇ ವಿಶೇಷತೆ ಅನುಸರಿಸುವುದು ಒಳಿತು.  ನಮ್ಮ ಜೀವನವನ್ನು ವಿಭಾಗಿಸಬಾರದು.  ಮನುಕುಲದ ಸೇವೆ ಮುಖ್ಯ ಎಂದು ಪ್ರತಿಪಾದಿಸುತ್ತಿದ್ದ ಸತ್ಯಸಾಯಿಬಾಬಾ ಅವರ ಸಂದೇಶ ಜಗತ್ತಿನ ಬಹುತೇಕ ಸಮಸ್ಯೆಗಳಿಗೆ ಉತ್ತರವಾಗಿದೆ ಎಂದ ಪದ್ಮನಾಭಪೈ,  ತಮ್ಮ ಕುಟುಂಬದೊಂದಿಗೆ ಬಾಬಾರ ಒಡನಾಟವನ್ನು ವಿವರಿಸಿ ಅವರ ಲೀಲೆಗಳನ್ನು ತೆರೆದಿಟ್ಟರು.

ಶ್ರೀಸತ್ಯಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ಸ್ವಾಗತಿಸಿ, ಚಿಕ್ಕಮಗಳೂರು ಸೇವಾಕ್ಷೇತ್ರದ ಅಧ್ಯಕ್ಷ ಟಿ.ಪಿ.ಭೋಜೇಗೌಡ ವಂದಿಸಿದರು.  ಬಾಬಾರ ಪವಾಡಗಳನ್ನು ಕುರಿತಂತೆ ಮಕ್ಕಳ ಕಿರುನಾಟಕ ಗಮನಸೆಳೆಯಿತು. ಪ್ರಿಯಾಪೈ ನೇತೃತ್ವದಲ್ಲಿ ಭಜನೆ ನಡೆಯಿತು.  ರಾಜ್ಯ ಸೇವಾ ಸಂಯೋಜಕ ಪ್ರಭಾಕರಬೀರಯ್ಯ ಮುಂದಾಳತ್ವದಲ್ಲಿ ಮಂಗಳಾರತಿ ಮಾಡಲಾಯಿತು.

ಆಶಾಕಿರಣ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಶ್ರೀಸಾಯಿ ಏಂಜೆಲ್ಸ್ ಶಿಕ್ಷಣಸಂಸ್ಥೆ ಮುಖ್ಯಸ್ಥರಾದ ವಿಜಯಾ ಮತ್ತು ಶ್ರೀನಾಗೇಶ್, ಪಲ್ಲವಿಸಿ.ಟಿ.ರವಿ, ಜಿಲ್ಲಾಸಂಯೋಜಕ ವೆಂಕಟೇಶ್-ಪಂಚಾಕ್ಷರಯ್ಯ, ಮಾಜಿಜಿಲ್ಲಾಧ್ಯಕ್ಷ ಅಂಕೋಲೇಕರ್, ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮತ್ತಿತರರು ಪಾಲ್ಗೊಂಡಿದ್ದರು ಟಿಪಿಬಿ ಭಜನಾಕೇಂದ್ರದಲ್ಲಿ ಪ್ರೇಮವಾಹಿನಿ ರಥಯಾತ್ರೆ ವಾಸ್ತವ್ಯಹೂಡಿತ್ತು.

ಇಂದುಬೆಳಗಿನಜಾವ ಓಂಕಾರ, ಸುಪ್ರಭಾತ, ಸ್ವಾಮಿಅಷ್ಟೋತ್ತರ ಗೃಹಮಂಡಳಿ ಬಡಾವಣಿಯಲ್ಲಿ ನಗರಸಂಕೀರ್ತನೆ ಟಿ.ಪಿ.ಭೋಜೇಗೌಡರ ನೇತೃತ್ವದಲ್ಲಿ ನಡೆಯಿತು. 

ಬೆಳಗು ಬೈಕ್ರ್ಯಾಲಿಯೊಂದಿಗೆ ಹೊರಟ ಪ್ರೇಮವಾಹಿನಿ ರಥಯಾತ್ರೆಗೆ ಶಾಸಕ ಎಚ್.ಡಿ.ತಮ್ಮಯ್ಯ, ಸೇವಾಕ್ಷೇತ್ರದ ಅಧ್ಯಕ್ಷ ಎಂ.ಆರ್.ನಾಗರಾಜ್, ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ಸೇರಿದಂತೆ ಹಲವು ಗಣ್ಯರು ಪಾದ ನಮಸ್ಕಾರದೊಂದಿಗೆ ಗೌರವ ಸಮರ್ಪಿಸಿದರು.  ಎಐಟಿವೃತ್ತ ಹಾದು ಕಲ್ಯಾಣನಗರದ ಬೈಪಾಸ್ ರಸ್ತೆಯ ಪಂಚಾಕ್ಷರಯ್ಯ ಮನೆಯಂಗಳದ ಭಜನಾಮಂಡಳಿಗೆ ಭೇಟಿನೀಡಿ ಪಾದಸ್ಪರ್ಶ ಪೂಜೆಗೆ ಅವಕಾಶ ಕಲ್ಪಿಸಲಾಯಿತು. ಕೆ.ಎಂ.ರಸ್ತೆಯ ಮೂಲಕ ನಗರದ ಶ್ರೀಕಾಮಧೇನು ಗಣಪತಿ ಕ್ಷೇತ್ರಕ್ಕೆ ಕರೆತರಲಾಯಿತು. 

ಬಿಸಿಲಿನಝಳ ಹೆಚ್ಚುತ್ತಿದ್ದರೂ ನೂರಾರು ಸಾಯಿಭಕ್ತರು ಶ್ವೇತಸಮವಸ್ತ್ರ, ನೀಲಿಕೊರಳಪಟ್ಟಿ, ಲಾಂಛನವನ್ನೊಳಗೊಂಡ ಟೋಪಿ ಧರಿಸಿದ್ದರು. ಸಮವಸ್ತ್ರಧಾರಿ ಮಹಿಳೆಯರು ಕಳಸ, ಪೂರ್ಣಕುಂಭ,  ಧರ್ಮಧ್ವಜ, ಧರ್ಮಘೋಷದೊಂದಿಗೆ ಪ್ರೇಮವಾಹಿನಿ ರಥಯಾತ್ರೆಯ ನಗರ ಮೆರವಣಿಗೆ ಆರಂಭಗೊಂಡಿತು.  ನಾದಸ್ವರ ಮಂಗಳವಾದ್ಯ, ನೃತ್ಯಭಜನೆ, ಕರಡಿಕುಣಿತ, ನಾಸಿಕ್ಟ್ರಮ್, ಡೊಳ್ಳು ಸೇರಿದಂತೆ ಕಲಾತಂಡಗಳು ಪಾಲ್ಗೊಂಡಿದ್ದವು ಬೃಹದಾಕಾರದ ಮೇಷ ವಿಶೇಷ ಗಮನಸೆಳೆಯಿತು. 

ಬಾಬಾರವರ ಸಂದೇಶಗಳನ್ನು ಸಾರುವ ಬಿತ್ತಿಪತ್ರ ಹಿಡಿದ ಭಕ್ತರು ಶಿಸ್ತುಬದ್ಧವಾಗಿ ಸಾಗಿದ್ದು  ರತ್ನಗಿರಿರಸ್ತೆ,  ಬಸವನಹಳ್ಳಿ, ಹನುಮಂತಪ್ಪವೃತ್ತ ಹಾದು ಎಂ.ಜಿ.ರಸ್ತೆ, ಮುಖ್ಯಅಂಚೆಕಛೇರಿ ನಾಯ್ಡುರಸ್ತೆ, .ಜಿ.ರಸ್ತೆ, ಪ್ರಧಾನ ಬಸ್ನಿಲ್ದಾಣ ಶ್ರೀಸತ್ಯಸಾಯಿರಸ್ತೆ ಮೂಲಕ ಮಧುವನ ಬಡಾವಣೆಯ ಶ್ರೀಸಾಯಿಸೇವಾಕ್ಷೇತ್ರಕ್ಕೆ ತಲುಪುವಾಗ ಮಧ್ಯಾಹ್ನದ ಸುಡುಬಿಸಿಲು ಆವರಿಸಿತ್ತು. 

ಮಾರ್ಗದುದ್ದಕ್ಕೂ ಜಲಪ್ರೋಕ್ಷಣೆ ಮೂಲಕ ಅಲ್ಲಲ್ಲಿ ರಂಗೋಲಿ, ಹೂವಿನ ಅಲಂಕಾರದೊಂದಿಗೆ ಸ್ವಾಗತಿಸಿ ಪುಟಪರ್ತಿಯಿಂದ ತಂದಿದ್ದ ಪಾದುಕೆಗಳಿಗೆ ಪೂಜೆಸಲ್ಲಿಸಿ ಆರತಿಯೆತ್ತಿ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ಮಂದಿರದಲ್ಲಿ ಮಹಾಮಂಗಳಾರತಿಯೊಂದಿಗೆ ಭವ್ಯ ಮೆರವಣಿಗೆ ಸಮಾಪನಗೊಂಡಿತು.

No comments:

Post a Comment