Wednesday, 4 March 2026

ಆಲ್ದೂರು : ಭೂತನಕಾಡು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಸ್ಮರಣಾರ್ಥ ಕ್ರಿಕೆಟ್ ಲೀಗ್ ಗುಡ್ಡದೂರು ಸಹರಾ ತಂಡ ಚಾಂಪಿಯನ್


 ಆಲ್ದೂರು ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಭೂತನಕಾಡು ಗ್ರಾಮದ ಕಲ್ಲುಬಂಡೆ ಕ್ರೀಡಾಂಗಣದಲ್ಲಿ ಯಾಶಿಕ ವೀಲ್ಸ್  ಕೇರ್ ಮತ್ತು ಬಿ ಎಸ್ ಕೆ ಬ್ರದರ್ಸ್ ಆಯೋಜಿಸಿದ್ದ ಮೂರು ದಿನಗಳ ಲೀಗ್ ಮಾದರಿಯ ಕ್ರೀಡಾಕೂಟ ಸೋಮವಾರ ಮುಕ್ತಾಯವಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಧ್ರುವ ಕುಮಾರ್, ಸ್ಥಳೀಯ ಕ್ರೀಡಾಕೂಟಗಳಿಂದ ಯುವಕರಲ್ಲಿ ಸ್ನೇಹ ಸಂಗಮವಾಗುತ್ತದೆ ಸಂಬಂಧವನ್ನು ವೃದ್ಧಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಗೆದ್ದಂತ ತಂಡಗಳಿಗೆ ಅಭಿನಂದನೆ ತಿಳಿಸಿದರು.

ಮಾಜಿ ಪಂಚಾಯಿತಿ ಉಪಾಧ್ಯಕ್ಷ ಗುರುವಪ್ಪ, ಪ್ರಪಂಚವೇ ಕೊಂಡಾಡುತ್ತಿರುವ ವೃಕ್ಷಮಾತೆ ತಿಮ್ಮಕ್ಕ ರವರ ಸ್ಮರಣಾರ್ಥವಾಗಿ ಕ್ರೀಡಾಕೂಟ  ಆಯೋಜಿಸಿ ಎಲ್ಲಾ ಆಟಗಾರರಿಗೆ ಅತಿಥಿಗಳಿಗೆ ಸಸಿಯನ್ನು ನೀಡುವ ಮೂಲಕ ಪರಿಸರ ಜಾಗೃತಿ ಮೆರೆದ ಆಯೋಜಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೂತ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಗುಡ್ಡದೂರು ಸಹರಾ ತಂಡ ಪಡೆದು 35 ಸಾವಿರ ನಗದು ಬಹುಮಾನ ಗಳಿಸಿತು. ದ್ವಿತೀಯ ಸ್ಥಾನವನ್ನು ಹೊಸಪೇಟೆ ಜೈ ಭೀಮ್ ತಂಡ ಗಳಿಸಿ 20 ಸಾವಿರ ನಗದು ಬಹುಮಾನ ತನ್ನದಾಗಿಸಿಕೊಂಡಿತು.

ತೃತೀಯ ಸ್ಥಾನ ದೇವಿರಮ್ಮ ತಂಡ ಪಡೆದು 10 ಸಾವಿರ ನಗದು ಬಹುಮಾನ ಪಡೆಯಿತು.ಚತುರ್ಥ ಸ್ಥಾನವನ್ನು ಪಡೆದ ಸತ್ತಿ ಹಳ್ಳಿ ತಂಡ 5 ಸಾವಿರ ನಗದು ಬಹುಮಾನ ಗಳಿಸಿತು.

ಕ್ರೀಡಾಕೂಟದ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಸತ್ತಿಹಳ್ಳಿ ತಂಡದ ಶಶಿ, ಬೆಸ್ಟ್ ಬೌಲರ್ ಪ್ರಶಸ್ತಿಗೆ ಜೈ ಭೀಮ್ ತಂಡದ ಅಜಿತ್ ಪಡೆದರು.

ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಹರಾ ತಂಡದ ರವಿ ಹಾಗೂ ಸರಣಿ ಸರ್ವೋತ್ತಮ ಪ್ರಶಸ್ತಿ ಸಹರ ತಂಡದ ವಿಶ್ವ, ಉತ್ತಮ ಆಟಗಾರ ಪ್ರಶಸ್ತಿಗೆ ದೇವಿರಮ್ಮ ತಂಡದ ತನು ಭಾಜನರಾದರು.

ಸಮಾರೋಪದಲ್ಲಿ ಸುರೇಶ್ ಜೋಶಿ ಹೊಸಪೇಟೆ, ರಫೀಕ್ ತಬ್ರೇಜ್,

ಸುಬ್ಬಣ್ಣ, ಗೀತಾ ಆನಂದ್, ಪ್ರಶಾಂತ್, ಸತೀಶ್ ಪೂಜಾರಿ,ಸಂದೇಶ್, ಜಗನ್ನಾಥ್, ಗಿರೀಶ್,ಅನೀತ್, ಸಂತೋಷ್ ,ರವಿ ,ವೆಂಕಟೇಶ್, ಸುನಿಲ್ ಮಂಜುನಾಥ್ ಅರ್ಚಕ ಚಂದ್ರನಾಥ್ ಭಟ್, ಸಸಿಗಳ ದಾನಿಗಳಾದ ಸುಧಾಕರ್ ಮತ್ತು ಶರತ್, ಆಯೋಜಕರಾದ ಸತೀಶ್ ಕುಮಾರ್ ಬಿಎಸ್,ಲೋಕೇಶ್ ಕುಮಾರ್ ಬಿಎಸ್, ರವಿ ಆರ್, ಇದ್ದರು.

No comments:

Post a Comment