Monday, 2 March 2026

ಭೂಸ್ವಾದೀನ ಪ್ರಕ್ರಿಯೆ ವಿಳಂಬದಿಂದ ಮೂಗ್ತಿಹಳ್ಳಿ ಮೂಡಿಗೆರೆ ಹೆದ್ದಾರಿ ಕಾಮಗಾರಿಗೆ ಅಡಚಣೆಯಾಗಿದೆ : ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ

ಜಿಲ್ಲಾಡಳಿತದ ಭೂಸ್ವಾದೀನ ಪ್ರಕ್ರಿಯೆ ವಿಳಂಬದಿಂದ ಮೂಗ್ತಿಹಳ್ಳಿ ಮೂಡಿಗೆರೆ ಹೆದ್ದಾರಿ ಕಾಮಗಾರಿಗೆ ಅಡಚಣೆಯಾಗಿದೆ 


 ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಅವರು ಭಾನುವಾರ ದಾರದಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಲ್ಲುಪುರಂ ಮಂಗಳೂರು ರಸ್ತೆ ಅಗಲೀಕರಣ ಯಾವುದೇ ತೊಂದರೆಯಿಲ್ಲದೇ ಪ್ರಗತಿಯಲ್ಲಿ ಸಾಗುತ್ತಿದೆ. ಆದರೆ ಮೂಗುತಿಹಳ್ಳಿಯಿಂದ ಹ್ಯಾಂಡ್ಪೋಸ್ಟ್ ಸರ್ಕಲ್ ವರೆಗೆ ರಾಷ್ಟ್ರೀಯ ಹೆದ್ದಾರಿ 173 ಅಗಲೀಕರಣ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ 15 ಬಾರಿ ಸಭೆ ನಡೆಸಿದ್ದೇನೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದು ರಸ್ತೆ ಅಗಲೀಕರಣಕ್ಕೆ ಹಿನ್ನಡೆಯಾಗಿದೆ. ಈಗ ಹೊಸ ಜಿಲ್ಲಾಧಿಕಾರಿ ಬಂದಿದ್ದು, ಅವರೊಂದಿಗೆ ಕೂಡ ಚರ್ಚೆ ನಡೆಸಿ ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಅಂತ್ಯಗೊಳಿಸಬೇಕೆಂದು ಸೂಚಿಸಲಾಗಿದೆ. ಈಗಾಗಲೇ 3D ನಕ್ಷೆ ತಯಾರಿಸಿ ದೆಹಲಿಗೆ ಕಳಿಸಲಾಗಿದ್ದು, ಶೀಘ್ರದಲ್ಲಿ ಅನುಮೋಧನೆಗೊಳಿಸಲು ಕ್ರಮ ವಹಿಸಲಾಗುವುದು ಎಂದುಹೇಳಿದರು.

ಕಾಡಾನೆ ಹಾವಳಿಯಿಂದ ರೈತರು, ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಾನು ರಾಜ್ಯದ ಅರಣ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ಕೂಡಲೇ  ರೈಲ್ವೇ ಹಳಿ ಮಾಡಲು ತಿಳಿಸಿದ್ದೇನೆ. ಸರಕಾರದಲ್ಲಿ ಹಣದ ಕೊರತೆಯಾದರೆ ಕೇಂದ್ರ ಸರಕಾರದ ಸಹಾಯ ಪಡೆಯಲು ತಿಳಿಸಿದ್ದೇನೆಂದು ಹೇಳಿದರು.

No comments:

Post a Comment