Wednesday, 4 March 2026

ಚಿಕ್ಕಮಗಳೂರು : ಅಕ್ಕಮಹಾದೇವಿ ಮಹಿಳಾಸಂಘದ ಕೇತಲಾದೇವಿ ತಂಡದಿಂದ ಹೋಳಿ-ಮಹಿಳಾ ದಿನಾಚರಣೆ

ಹೆಣ್ಣು ಎಂದರೆ ಸಹನೆ, ಸಂಸ್ಕಾರ, ಸದ್ಗುಣಗಳ ಗಣಿ.  ಹೆಣ್ಣು ಮೊದಲು ತನ್ನನ್ನು ತಾನು ಪ್ರೀತಿಸುವ-ಗೌರವಿಸುವ ಮನೋಭಾವ ಬೆಳಸಿಕೊಳ್ಳಬೇಕೆಂದು ನಿವೃತ್ತ ಶಿಕ್ಷಕಿ ಮಹಾದೇವಿ ನುಡಿದರು.

ಅಕ್ಕಮಹಾದೇವಿ ಮಹಿಳಾಸಂಘದ ಕೋಟೆಬಡಾವಣೆಯ ಶರಣೆ ಕೇತಲಾದೇವಿ ತಂಡ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಹೋಳಿ ಹುಣ್ಣಿಮೆಯಂದು ಆಯೋಜಿಸಿದ್ದ ‘ಮಹಿಳಾ ದಿನಾಚರಣೆಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಳ್ಮೆಯ ಮೌನಮೂರ್ತಿ ಹೆಣ್ಣು.  ಕರುಣಾಮಯಿ, ಪ್ರೀತಿಸುವವಳು, ಪ್ರೀತಿಸಲ್ಪಡುವವಳು. ತಾಯಿ, ಅತ್ತೆ, ಮಗಳು, ತಂಗಿ, ಅತ್ತಿಗೆ, ನಾದಿನಿ, ಅಕ್ಕ, ಸ್ನೇಹಿತೆಯಾಗಿ ಹೆಣ್ಣು ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾಳೆ.  ಏನೇ ಸಮಾನತೆ ಸಿಕ್ಕರೂ ಹೆಣ್ಣು ನೆಮ್ಮದಿಯನ್ನು ಕಾಣುತ್ತಿಲ್ಲ.  ಈ ಬಗ್ಗೆ ಆಲೋಚಿಸಿದರೆ ಹೆಣ್ಣೆಗೆ ಹೆಣ್ಣೆ ಶತ್ರು ಆಗಿರುವುದು ಕಾಣುತ್ತದೆ.  ಪರಸ್ಪರ ಪ್ರೀತಿ ವಿಶ್ವಾಸ ತೋರುವುದರ ಜೊತೆಗೆ ತನ್ನನ್ನುತಾನು ಗೌರವಿಸಿಕೊಳ್ಳುವಂತಾದರೆ ಆತ್ಮವಿಶ್ವಾಸ ಬದುಕು ನಮ್ಮದಾಗುತ್ತದೆ ಎಂದರು.

ನೋವಿನಲ್ಲಿರುವವರಿಗೆ ಸಾಂತ್ವನ ಹೇಳುವ ಮನೋಭಾವ ನಮ್ಮದಾಗಬೇಕು.  ಪರಸ್ಪರ ಪ್ರೀತಿ ವಿಶ್ವಾಸ ಸ್ನೇಹ ಸೌಹಾರ್ದತೆ ಕುಟುಂಬದ ಸದಸ್ಯರ ಜೊತೆಗೆ ಸಮಾಜಬಂಧುಗಳೊಂದಿಗೂ ಇದ್ದರೆ ಒಳಿತು.  ಒಂಟಿತನ ದೂರವಾದರೆ  ನಾವು ಅನುಭವಿಸುವ ಸಂಕಟ, ಯಾತನೆ ನೋವು ದೂರವಾಗುತ್ತದೆ ಎಂದ ಮಹಾದೇವಿ, ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.  ತಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂತಹ ಸಂಘಟನೆ ಅಗತ್ಯ ಎಂದರು.

ನಾವಾಡುವ ಮಾತು ಎಲ್ಲ ಸಮಸ್ಯೆಗಳಿಗೂ ಕಾರಣವೆಂಬುದನ್ನು ಅರಿಯಬೇಕು.  ಏನು, ಎಷ್ಟು, ಹೇಗೆ ಹೇಳಬೇಕೆಂಬ ಜ್ಞಾನ, ಕೌಶಲ್ಯ, ವಿವೇಕ, ವಿವೇಚನೆ ಇದ್ದರೆ ಸಮಸ್ಯೆಗಳು ಕಡಿಮೆಯಾಗುತ್ತವೆ.  ದೇವರು ನಮಗೆ ಒಂದುಬಾಯಿ, ಎರಡು ಕಿವಿ ನೀಡಿರುವುದು ಆಡುವ ಮಾತಿಗಿಂತ ಕೇಳುವ ಮಾತು ದುಪ್ಪಟ್ಟಿರಬೇಕೆಂಬುದನ್ನು ಸಂಕೇತಿಸುತ್ತದೆ.  ಅರಿತು ಮಾತನಾಡಿದರೆ ಮುತ್ತು, ಮರೆತು ಮಾತನಾಡಿದರೆ ಮೃತ್ಯು ಎಂಬ ನಾಣ್ನುಡಿ ಉಲ್ಲೇಖಿಸಿದರು.

 ಮಾತನÀ್ನು ಜ್ಯೋತಿರ್ಲಿಂಗ ಎನ್ನುತ್ತಾರೆ.  ಕೋಪದಿಂದ ಮಾತಾಡಿದರೆ ಗುಣ ಕಳೆದುಕೊಳುತ್ತದೆ. ಹೆಚ್ಚಾಗಿ ಮಾತಾಡಿದರೆ ಶಾಂತಿಯನ್ನು, ಅಹಂಕಾರದಿಂದ ಮಾತನಾಡಿದರೆ ಪ್ರೀತಿಯನ್ನು, ಸುಳ್ಳು ಮಾತನಾಡಿದರೆ ವ್ಯಕ್ತಿತ್ವವನ್ನು, ವೇಗವಾಗಿ ಮಾತನಾಡಿದರೆ ಅರ್ಥವನ್ನು ಕಳೆದುಕೊಳ್ಳುತ್ತದೆ ಎಂದ ಮಹಾದೇವಿ,  ಹಿತ ಮತ್ತು ಸತ್ಯವಾದ ಮೃದುಮಾತುಗಳು ಕೇಳುಗರಿಗೆ ಪ್ರಿಯವಾಗುತ್ತದೆ ಎಂದರು. 

ಮಾತು ಮನಸ್ಸಿನ ಕನ್ನಡಿ.  ಕಣ್ಣುಗಳು ಮುನ್ನುಡಿ. ಮನಸಾಕ್ಷಿ ಶುಭನುಡಿ. ಒಂಟಿಯಾಗಿದ್ದಾಗ ಆಯೋಚನೆಯ ಮೇಲೆ ಹಿಡಿತವಿರಲಿ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು.  ಬಾಯಿತಪ್ಪಿ ಆಡಿದ ಮಾತನ್ನು ಸರಿಪಡಿಸಲಾಗದು ಎಂದ ಮಹಾದೇವಿ, ಧೈರ್ಯ ದಿಟ್ಟತನವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ಕಲೆ, ಬುದ್ಧಿವಂತಿಕೆ, ಪ್ರತಿಭೆಯನ್ನು ಒಗ್ಗೂಡಿಸುವ ಶಕ್ತಿ ಸಂಘಟನೆಗಿದೆ ಎಂದರು.

ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಹೋಳಿಹುಣ್ಣಿಮೆಯನ್ನು ವಸಂತ ಹುಣ್ಣಿಮೆ ಎಂದೂ ಸಹ ಕರೆಯುತ್ತಾರೆ.  ವಸಂತಕಾಲದ ಆಗಮನವನ್ನು ಸಂಭ್ರಮಿಸುವ ಹಿಂದೂ ಹಬ್ಬವಾಗಿದೆ ಎಂದ ಆಶಾ, ಕೆಟ್ಟದ್ದನ್ನು ಸುಟ್ಟು ಒಳ್ಳೆಯದರ ವಿಜಯ ಸಾಧಿಸುವುದೆ  ಹೋಳಿ ದಹನ ಎಂದು ವಿವರಿಸಿದರು.

ನಿರ್ದೇಶಕಿ ಪುಷ್ಪಾಸೋಮಶೇಖರ್ ಪ್ರಾಸ್ತಾವಿಸಿ ಮಹಿಳೆಯರÉ ಈ ಸಂಘದಲ್ಲಿವನ್ನು ಕಟ್ಟಿ 17ವರ್ಷಗಳಿಂದ ಅವರಲ್ಲಿರುವ  ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯಾಗಿದ್ದು, ಶರಣೆ ಕೇತಲಾದೇವಿ 12ನೆಯ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಅನುಭವಮಂಟಪದಲ್ಲಿ  ಕಾಯಕ ಮತ್ತು ದಾಸೋಹ ತತ್ತ್ವ ಅನುಸರಿಸಿ ಬದುಕಿದ ಶರಣೆ  ಎಂದರು.

ನಾನು ಎಂಬ ಅಹಂಕಾರ ಬಿಟ್ಟು, ಮಹಿಳೆ ಮಹಿಳೆಯರಿಗೆ ಗೌರವ ಕೊಡುವ ಈ ಸಂಘ ಪ್ರೀತಿ, ವಿಶ್ವಾಸ  ಸಹೋದರತ್ವವನ್ನು ಪ್ರತಿಬಿಂಬಿಸುವ ಹೋಳಿಹುಣ್ಣಿಮೆ ಬಣ್ಣದ ಹಬ್ಬವಾಗಿದ್ದು, ಜಾತಿ ಬೇಧ ಮರೆತು ಪರಸ್ಪರ ಬಣ್ಣ ಎರಚಿ ನೃತ್ಯದೊಂದಿಗೆ ಸಿಹಿ ಹಂಚಿ ತಿನ್ನುವ ಐಕ್ಯತೆಯ ಪ್ರತೀಕ ಎಂದರು.

ಸಂಘದ ನಿಕಟಪೂರ್ವ ಅಧ್ಯಕ್ಷೆ ಯಮುನಾಸಿ.ಶೆಟ್ಟಿ  ಇಂದು 80ನೆಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ  ಹಿನ್ನಲೆಯಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.  ಹಿರಿಯಸದಸ್ಯರಾದ ಸರ್ವಮಂಗಳಮ್ಮ ಅಲೆಗಾವಿ ಮತ್ತು ಸಂಗೀತ ರತ್ನ ಪ್ರಶಸ್ತಿ ಪುರಸ್ಕøತೆ ಶೈಲಾಬಸವರಾಜುರನ್ನು ಕೇತಲಾದೇವಿ ತಂಡದಿಂದ ಸನ್ಮಾನಿಸಲಾಯಿತು.

ನಿರ್ದೇಶಕಿ ಭವಾನಿವಿಜಯಾನಂದ ಮತ್ತು ಶೈಲಾಬಸವರಾಜು ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಗುಣರತ್ನನಂದೀಶ್ ಸ್ವಾಗತಿಸಿ, ಅರುಣಾಸಿದ್ದೇಶ್ ವಂದಿಸಿದರು. ಅನಿತಾಹೇಮಂತ್ ಪ್ರಾರ್ಥಿಸಿ, ಚಂದ್ರಕಲಾ ಅತಿಥಿ ಪರಿಚಯಿಸಿದರು.  ಮಂಜುಳಾಮಹೇಶ್, ಸೌಭಾಗ್ಯಜಯಣ್ಣ ತಂಡ ನಾಡಗೀತೆ ಹಾಡಿದರು.  ರೀತು ಮತ್ತು ವೀಣಾಮಂಜುನಾಥ್ ತಂಡದ ಜಾನಪದನೃತ್ಯ ಗಮನಸೆಳೆಯಿತು.  ಪಾರ್ವತಮ್ಮ ಮತ್ತು ರಾಜೇಶ್ವರಿ ವಚನಗಾಯನ ಮಾಡಿದರು.

ಗೌರವಾಧ್ಯಕ್ಷೆ ಭಾರತಿಶಿವರುದ್ರಪ್ಪ, ಉಪಾಧ್ಯಕ್ಷೆ ಕುಸುಮಾರಾಜಶೇಖರ್, ಕಾರ್ಯದರ್ಶಿ ಆಶಾಹೇಮಂತ್, ಖಜಾಂಚಿ ಪಾರ್ವತಿಬಸವರಾಜು, ಸಂಘಟನಾಕಾರ್ಯದರ್ಶಿ ಮಂಜುಳಮ್ಮ ವೇದಿಕೆಯಲ್ಲಿದ್ದರು.

ಸಾಂಸ್ಕøತಿಕ ಕಾರ್ಯಕ್ರಮ ಆಕರ್ಷಕವಾಗಿದ್ದು, ವಿವಿಧ ಆಟೋಟಸ್ಪರ್ಧಾವಿಜೇತರಿಗೆ ಬಹುಮಾನವನ್ನು ಪುಷ್ಪಾಸೋಮಶೇಖರ್ ವಿತರಿಸಿದರು.

No comments:

Post a Comment