ಚಿಕ್ಕಳ್ಳ
ಗ್ರಾಮಕ್ಕೆ ಜಲಜೀವನ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆ ಮಂಜೂರಾಗಿ ಅದರ ಕಾಮಗಾರಿ ಕುಂಟುತ್ತಾ ಸಾಗಿ
ಈಗ ಒಂದು ಹಂತಕ್ಕೆ ಬಂದಿದೆ. ನೀರಿನ ಪೈಪ್, ಟ್ಯಾಂಕ್ ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.
ಆದರೆ ವಿದ್ಯುತ್ ಸಂಪರ್ಕ ಮಾತ್ರ ಬಾಕಿಯಿದೆ. ಇದರಿಂದ ಕಾಮಗಾರಿ ಮುಗಿದು ಆರು ತಿಂಗಳಾದರೂ ವಿದ್ಯುತ್
ಸಂಪರ್ಕವಿಲ್ಲದೇ ಜನರಿಗೆ ನೀರಿನ ಸೌಲಭ್ಯ ಸಿಗದಂತಾಗಿದೆ. ದೇವರು ಕೊಟ್ಟರು ಪೂಜಾರಿ ಕೊಡ ಎಂಬಂತೆ ಸರ್ಕಾರ
ಜನರಿಗೆ ಅನುಕೂಲ ಆಗಲಿ ಎಂದು ಮಂಜೂರು ಮಾಡಿರುವ ಯೋಜನೆ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಉಪಯೋಗಕ್ಕೆ
ಬಾರದಂತಾಗಿದೆ.
ಸುಮಾರು
40 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿರುವ ಈ ಯೋಜನೆಯಿಂದ ಚಿಕ್ಕಳ್ಳ ಗ್ರಾಮದ ಸುಮಾರು 45 ಮನೆಗಳಿಗೆ
ನೀರಿನ ಸಂಪರ್ಕ ಕಲ್ಪಿಸುವುದಾಗಿದೆ. ಇಲ್ಲಿ ಬಹುತೇಕರು ಬಡ ಕೂಲಿ ಕಾರ್ಮಿಕರಾಗಿದ್ದು, ನಿತ್ಯದ ಕಷ್ಟ
ಜೀವನದ ಜೊತೆಗೆ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಕುಡಿಯುವ ನೀರಿಗೂ ಸಹ ಬಹುದೂರದ ವರೆಗೆ ಸಾಗಿ
ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವ ಬಗ್ಗೆ ಸ್ಥಳೀಯರು
ಹಲವು ಬಾರಿ ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದ್ದರು ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಬರುತ್ತಿಲ್ಲ,
ಬದಲಿಗೆ ಜನರ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ
ಶಾಸಕರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ
ಸೂಕ್ತ ನಿರ್ದೇಶನ ನೀಡಿ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು
ಆಗ್ರಹಿಸಿದ್ದಾರೆ.

No comments:
Post a Comment