ಗುರ್ಜಾನಹಳ್ಳಿ ಗ್ರಾಮದ ರೈತ ಜಿ.ಕೆ.ಸೋಮಶೇಖರ್ ಹಾಗೂ ತಾಯಿ ತೀರ್ಥಾವತಿ ಪುತ್ರರಾದ ಮನೋಜ್ ಅವರು ಹಾಸನದ ಮಾವಿನಕೆರೆ ನವೋದಯ ಶಾಲೆಯಲ್ಲಿ ಆರನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಸುರತ್ಕಲ್ನ ಎನ್ಐಟಿಕೆ ಕಾಲೇಜಿನಲ್ಲಿ ಬಿ.ಟೆಕ್. ಪದವಿ ಪಡೆದಿದ್ದಾರೆ. ಪದವಿ ನಂತರ ಕ್ಯಾಂಪಸ್ ಆಯ್ಕೆಯಾದರೂ ಯುಪಿಎಸ್ಸಿ ಪರೀಕ್ಷೆ ಬರೆಯುವ ಉದ್ದೇಶದಿಂದ ಉದ್ಯೋಗಕ್ಕೆ ಸೇರದೆ, ಪರೀಕ್ಷಾ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.
ಮನೋಜ್ ಅವರ ಈ ಸಾಧನೆಗೆ ಕುಟುಂಬದವರು, ಸ್ನೇಹಿತರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ಯುವಕರಿಗೆ ಮನೋಜ್ ಸಾಧನೆ ಪ್ರೇರಣೆಯಾಗಿದೆ ಎಂದು ಮನೋಜ್ ಅವರ ತಂದೆ ಸೋಮಶೇಖರ್ ಹಮ್ಮೆಯಿಂದ ತಿಳಿಸಿದ್ದಾರೆ.

No comments:
Post a Comment