ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ತಾಲ್ಲೂಕಿನಲ್ಲಿ 80 ಸಾವಿರಕ್ಕೂ ಅಧಿಕ ಜನ ಸಂಖ್ಯೆಯನ್ನು ಹೊಂದಿರುವ ಬಲಗೈ ಸಮುದಾಯಗಳಿಗೆ ಮತ್ತು ರಾಜ್ಯಾದಾದ್ಯಂತ ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಬಲಗೈ ಸಮುದಾಯಕ್ಕೆ ನ್ಯಾ.ನಾಗಮೋಹನ ದಾಸ್ ಅವೈಜ್ಞಾನಿಕ ವರದಿಯಿಂದ ಬಹಳ ಅನ್ಯಾಯವಾಗುತ್ತಿದ್ದು, ಪ್ರಥಮವಾಗಿ ಮೂಡಿಗೆರೆ ಮೀಸಲು ಕ್ಷೇತ್ರದಿಂದಲೇ ಹೋರಾಟವನ್ನು ಆರಂಬಿಸಿದ್ದು ಮಾರ್ಚ್ 13ರ ರಂದು ಪಂಜಿನ ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಮೈಸೂರಿನ ಅತಿಥಿ ಉಪನ್ಯಾಸಕರಾದ ಡಾ.ರಮೇಶ್ ರವರ ದಿಕ್ಸೂಜಿ ಭಾಷಣ ಮಾಡಲಿದ್ದು ಸಾರ್ವಜನಿಕರು ಮತ್ತು ಸಮುದಾಯದ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಮನವಿಗೊಂಡರು.
ರಾಘವೇಂದ್ರ ಚಿನ್ನಿಗ ಮಾತನಾಡಿ. ನಮ್ಮ ಹಕ್ಕುಗಳನ್ನು ನಾವು ಕೇಳಬೇಕಾದರೆ ಯಾರಿಗೂ ಮುಲಾಜು ಮಾಡೋಲ್ಲಾ. ಇಲ್ಲಿ ಬಲಗೈ ಸಮುದಾಯದ ನಾಲ್ಕು ಜನ ಎಂಎಲ್ಎ ಗಳಿದ್ದರೂ ಸಹ ಜಾತಿಯ ಸಮೀಕ್ಷೆ ಸಂಬಂಧದಲ್ಲಿ ಸಹಿತ ಯಾರು ಮಾರ್ಗದರ್ಶನ ಮಾಡಿಲ್ಲ. ನಾಳೆ ನಮ್ಮ ಮಕ್ಕಳ ಭವಿಷ್ಯಕ್ಕೆ ಮತ್ತು ನಾಳಿನ ಭವಿಷ್ಯಕ್ಕೊಸ್ಕರ ನಾವು ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು.
ಸುಂದರೇಶ್ ಹೊಯ್ಸಳಲು ಮಾತನಾಡಿ. ಬಲಗೈ ಸಮುದಾಯಕ್ಕೆ ಬಹಳಷ್ಟು ಅನ್ಯಾಯವಾಗುತ್ತಿದೆ. ನಾಗಮೋಹನ್ ದಾಸ್ ವರದಿ ವೈಜ್ಞಾನಿಕವಾಗಿ ಪರಿಗಣನೆ ಆಗಿಲ್ಲ. ಈಗ ಸಾಮಾನ್ಯವಾಗಿ ಎಲ್ಲರೂ ಕೂಡ ವಿದ್ಯಾವಂತರಾಗಿದ್ದಾರೆ. ಎಲ್ಲರಿಗೂ ಅಂಕಿ ಅಂಶಗಳ, ಸಾಧಕ ಬಾಧಕಗಳು ಗೊತ್ತಿರುತ್ತದೆ ಅಂತದರಲ್ಲೂ ಬಲಗೈ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ.ಅಸ್ಪರ್ಶರ ಪರವಾಗಿ ಅವರ ನೋವು ನಲಿವುಗಳಲ್ಲಿ ಸ್ಪಂದಿಸದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ವರದಿಯ ¨ಗ್ಗೆ ವಿಶ್ಲೇಷಣೆ ಅಗತ್ಯವಾಗಿದೆ ಎಂದರು. ನೈಜವಾದ ಅಸ್ಪರ್ಶ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ನ್ಯಾಯಕೊಡಿಸುವ ಕೆಲಸವಾಗಬೇಕಾಗಿದೆ ಎಂದರು.
ಡಾ.ಅರುಣ್ಕುಮಾರ್ ಹಾಂದಿ ಮಾತನಾಡಿ. ಈ ವರದಿಯಲ್ಲಿ ಲಂಬಾಣಿ ಮತ್ತು ಬೋವಿಗಳನ್ನು ತೆಗೆದುಕೋಂಡು ಬಂದು ಸೇರಿಸಿ ಹಾಕಿದ್ದರ ಪರಿಣಾಮ ಬಲಗೈ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ. ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಬೇಕು. ಪ್ರಸ್ತುತ ನೀಡುತ್ತಿರುವ ಜಾತಿ ಪ್ರಮಾಣ ಪತ್ರದಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳಿಗೆ ಅನಾನು ಕೂಲವಾಗುತ್ತಿದ್ದು ಕೂಡಲೇ ಇದನ್ನು ರದ್ದುಗೊಳಿಸಿ ಈ ಹಿಂದಿನಂತೆಯೇ ಆದಿ ಕರ್ನಾಟಕ ಪರಿಶಿಷ್ಟ ಜಾತಿ ಎಂದು ಕೂಡಲೇ ಸರ್ಕಾರ ಆದೇಶಿಸಬೇಕು. ಉದ್ಯೋಗದಲ್ಲಿ ರೋಷ್ಟರ್ ಬಿಂದುವಿನಲ್ಲಿ ಆಗಿರುವ ಲೋಪದೋಷಗಳನ್ನು ಸರಿ ಪಡಿಸಬೇಕು. ಬಲಗೈ ಸಮುದಾಯದ ಸಚಿವರು, ಶಾಸಕರ ಮೇಲೆ ಬೇರೆ ಯಾರು ಕೂಡ ಒತ್ತಡ ಹೇರದಂತೆ ತಡೆದು, ಅವಹೇಳನವಾಗಿ ನಿಂದಿಸುವುದನ್ನು ಕೂಡಲೇ ನಿಲ್ಲಿಸಬೇಕು. ಕೇಂದ್ರ ಸರ್ಕಾರ ಸ್ಪರ್ಷ ಜಾತಿಗಳನ್ನು ಅಸ್ಪøಸ್ಯ ಜಾತಿಗಳ ಪಟ್ಟಿಗೆ ಸೇರಿಸಿದ್ದು, ಕೂಡಲೇ ಸ್ಪರ್ಷ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬೀಡಬೇಕು. ಲಂಬಾಣಿ, ಬೋವಿ ಇತ್ಯಾದಿ, ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತವಾಗಿರುವ ಬಲಗೈ ಸಮುಧಾಯದವರಿಗೆ ಎಲ್ಲಾ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕೆಂಬ ಹಕ್ಕೋತ್ತಾಯಗಳನ್ನು ಮಂಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಉಪಸ್ಥಿತರಿದ್ದರು

No comments:
Post a Comment