ಈ ಸಂದರ್ಭದಲ್ಲಿ
ತಾಲೂಕು ಅರೋಗ್ಯ ಅಧಿಕಾರಿ ಡಾ ಹರೀಶ್ ಬಾಬು, ಕರ್ನಾಟಕ
ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ದಿನೇಶ್ ಕೆ ಎಂ ಹಾಗೂ ವೈದ್ಯರು ಮತ್ತು ನೌಕರರು ಉಪಸ್ಥಿತರಿದ್ದು
ತಮ್ಮ ಅಹವಾಲು ಸಲ್ಲಿಸಿದರು.
ರಾಜ್ಯದ ಎಲ್ಲಾ
ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡದೇ ಇರುವುದು.
ವೃಂದ ಮತ್ತು
ನೇಮಕಾತಿ ನಿಯಮಗಳನ್ನು ಪ್ರತಿ 03 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರ್ಕಾರಿ ಆದೇಶವಿದ್ದಾಗ್ಯೂ
ಸಹ ಉಲ್ಲಂಘಿಸಿ, 1973 ರಿಂದ ಇಲ್ಲಿಯವರೆಗೆ ಆರೋಗ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು
ತಿದ್ದುಪಡಿ ಮಾಡದೇ ಇರುವುದು.
'ಇಲಾಖೆಯ ಎಲ್ಲಾ
ವೃಂದಗಳ ಜೇಷ್ಠತಾ ಪಟ್ಟಿಯನ್ನು ಇದುವರೆವಿಗೂ ಪ್ರಕಟಿಸದೇ ಇರುವುದು.
ಇಲಾಖೆಯ ಎಲ್ಲಾ
ವೃಂದದ ಯಾವುದೇ ಅಧಿಕಾರಿ-ನೌಕರರಿಗೆ ಕಳೆದ 05 ವರ್ಷಗಳಿಂದ ಮುಂಬಡ್ತಿಗಳನ್ನು ನೀಡದೇ ಇರುವುದು.
ನಿಯಮಗಳಲ್ಲಿ
ಅವಕಾಶವಿದ್ದಾಗ್ಯೂ, ಸೇವಾನಿರತ ವೈದ್ಯರು, ಅಧಿಕಾರಿ-ನೌಕರರ ಉನ್ನತ ವ್ಯಾಸಂಗ/ಸ್ನಾತಕೋತ್ತರ ವ್ಯಾಸಂಗಕ್ಕೆ
ಅವಕಾಶ ನೀಡದೇ ಇರುವುದು.
ಇಲಾಖೆಯ ವರ್ಗಾವಣೆ
ಕಾಯಿದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದೇ ಅವೈಜ್ಞಾನಿಕವಾಗಿ ಕೌನ್ಸಿಲಿಂಗ್ ವರ್ಗಾವಣೆ ಮಾಡುತ್ತಿರುವುದು.
ವೈದ್ಯಕೀಯ
ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ
ಪಾಲಿಕೆ ಹಾಗೂ ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಎನ್-ಕೇಡರ್ ಹುದ್ದೆಗಳಿಗೆ ನೇಮಕಾತಿ,
ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿ-ನೌಕರರನ್ನೇ ನಿಯೋಜಿಸುವುದು.
ಸಾರ್ವಜನಿಕರಿಗೆ
ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರೆ
ವೃಂದದ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು.
ಗುತ್ತಿಗೆ
ವೈದ್ಯರು-ನೌಕರರು ಹಾಗೂ ಎನ್.ಹೆಚ್.ಎಂ. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕಾಲ ಕಾಲಕ್ಕೆ
ಸೂಕ್ತ ವೇತನ ಹೆಚ್ಚಳ ಮಾಡದೇ ಇರುವುದು.
ಇಲಾಖೆಯಲ್ಲಿ
ಕೇಂದ್ರ ಪುರಸ್ಕೃತ ಯೋಜನೆ ಆಡಿ ಕಾರ್ಯನಿರತ ಸುಮಾರು 6000 ನೌಕರರಿಗೆ ಹಲವಾರು ವರ್ಷಗಳಿಂದ 3-4 ತಿಂಗಳಿಗೊಮ್ಮೆ
ವೇತನ ಭತ್ಯೆಗಳನ್ನು ನೀಡುತ್ತಿರುವುದು.
ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞವೈದ್ಯರು ಇತರೆ ಸಿಬ್ಬಂದಿಯವರಿಗೆ ಸಿ.ಜಿ.ಹೆಚ್.ಎಸ್/ಎ.ಐ.ಸಿ.ಟಿ.ಇ. (ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿಯಲ್ಲಿ) ವೇತನ ನೀಡುವುದು.


.jpeg)
No comments:
Post a Comment