Monday, 9 March 2026

 
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಬಾನಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಇಂಪಾ ಸವಿನ್ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ  ಮುಗುಳಿಕಟ್ಟೆ ಲೋಕೇಶ್  ಹಾಗೂ ತಾಲೂಕ್  ಅಧ್ಯಕ್ಷರಾದ ಆರ್ ಪ್ರಕಾಶ್ ಉಪಸ್ಥಿತರಿದ್ದರು. ಇಂಪಾ ಅವರ ಪತಿ ಸವೀನ್ ಹಾಗೂ ಸಹೋದರ ಪಿಡಿಒ ಇಂತೇಶ್, ಭಾವ ರವಿ ಅವರು ಭಾಗವಹಿಸಿದ್ದರು.


ಮೂಡಿಗೆರೆ : ಬಾನಹಳ್ಳಿಯ ಸರ್ಕಾರಿ ಶಾಲೆಗೆ ಅತ್ಯುತ್ತಮ ಎಸ್ ಡಿಎಂಸಿ ಪ್ರಶಸ್ತಿ


 ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯು ರಾಜ್ಯಮಟ್ಟದ  ಅತ್ತ್ಯುತ್ತಮ ಎಸ್.ಡಿ.ಎಂ.ಸಿ. ಪ್ರಶಸ್ತಿ ಗಳಿಸಿದೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಆರ್.ಪ್ರಕಾಶ್ ಮಾಹಿತಿ ನೀಡಿ ಮಾತನಾಡಿ 'ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಾಜ್ಯ ಮಟ್ಟದ ಉತ್ತಮ ಎಸ್ ಡಿಎಂಸಿ ಪುಷ್ಟಿಯಾಗಿ ಆಯ್ಕೆಯಾಗಿದೆ.ಎಸ್ ಡಿಎಂಸಿ ಪುಷ್ಟಿ ಕಾರ್ಯಕ್ರಮಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.ಒಟ್ಟು ಒಂಬತ್ತು ಶಾಲೆಗಳು ಪುಷ್ಟಿ ಕಾರ್ಯಕ್ರಮದಲ್ಲಿ ಆಯ್ಕೆಯಾಗಿದ್ದು ಅದರಲ್ಲಿ ಬಾನಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.ಒಂಬತ್ತು ಶಾಲೆಗಳಿಗೆ ತಾಲ್ಲೂಕು ಹಾಗೂ ಜಿಲ್ಲೆಯಿಂದ ರಾಜ್ಯ ಹಂತದಲ್ಲಿ ಮೂರು ರೀತಿಯ ಸಮಿತಿಗಳು ಶಾಲೆಗೆ ಭೇಟಿ ನೀಡಿ ತಪಾಸಣೆ ನಡೆಸಿ ರಾಜ್ಯ ಮಟ್ಟಕ್ಕೆ ವರದಿ ನೀಡಿದ್ದು ಬಾರಿ ಅತ್ತ್ಯುತ್ತಮ ಎಸ್ ಡಿಎಂಸಿ ಪುಷ್ಟಿಗೆ ಆಯ್ಕೆಯಾಗಿರುತ್ತದೆ.ಅಲ್ಲದೇ ಶಾಲೆಯ ಶಿಕ್ಷಕಿ ಇಂಪಾ ಸವಿನ್ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯು ಕೂಡ ಲಭಿಸಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ' ಎಂದರು. ಶಾಲಾ ಸಮಿತಿಯ ಅಧ್ಯಕ್ಷ ದಿನೇಂದ್ರ ಮಾತನಾಡಿ' ಶಾಲೆಯ ಸಮಿತಿಯ ಸದಸ್ಯರು,ಪೋಷಕರು  ಒಗ್ಗಟ್ಟಾಗಿ ಶಾಲೆಯ ಅಭಿವೃದ್ದಿಗಾಗಿ ಶ್ರಮಿಸಿರುವುದರಿಂದ ಶಾಲೆಗೆ ಪ್ರಶಸ್ತಿ ದೊರೆತಿದೆ.ಶಿಕ್ಷಕವೃಂದ ಹಾಗೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇವೆ'ಎಂದರು.

ಸಂದರ್ಭದಲ್ಲಿ ಶಾಲೆಯ ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಆರ್.ಶ್ರೀಧರ್,ಮಾಜಿ ಉಪಾಧ್ಯಕ್ಷೆ ಅಮಿತಾ,ಪ್ರಸ್ತುತ ಉಪಾಧ್ಯಕ್ಷೆ ತೇಜಸ್ವಿನಿ ಪ್ರಸಾದ್,ಸವಿನ್ ಕುಮಾರ್,ರವಿ ಮತ್ತಿತರರು ಇದ್ದರು.

ಅನುದಾನಿತ ಶಾಲಾ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಸರ್ಕಾರ ಈಡೇರಿಸಲಿ.

ಬಣಕಲ್ ನ ಶ್ರೀ ವಿದ್ಯಾ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ ಜಿಲ್ಲಾ ಅನುದಾನ ಪ್ರಾಥಮಿಕ ಶಾಲಾ ಶಿಕ್ಷಕರ  ಶೈಕ್ಷಣಿಕ ಕಾರ್ಯಕ್ರಮ ಹಾಗೂ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ರಾಜ್ಯ ಅಧ್ಯಕ್ಷರಾದ ಎನ್ ರಾಜ್ ಗೋಪಾಲ್ : ಅನುದಾನಿತ ಶಾಲಾ ಶಿಕ್ಷಕರ ಅನೇಕ ಸಮಸ್ಯೆಗಳು ಸಂಘಟನೆ ಮೂಲಕ ಹೋರಾಟ ದಿಂದ ಮಾತ್ರ ಸಾಧ್ಯ,ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಯೋಜನೆ,ಕಾಲ್ಪನಿಕ ವೇತನ ಜಾರಿಗೊಳಿಸುವುದು,ಹಳೆ ಪಿಂಚಣಿ ಯೋಜನೆಯನ್ನು ಮಂಜೂರು  ಗೊಳಿಸುವುದು, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೈದ್ಯಕೀಯ ಭತ್ಯೆ ಯನ್ನು ನೀಡುವುದು ಮುಂತಾದ  ನ್ಯಾಯಯುತವಾದಂತ ಸಮಸ್ಯೆಗಳನ್ನು ಪಡೆಯುವಲ್ಲಿ ಸಂಘಟನೆ ಯ ಮೂಲಕ   ಮಾತ್ರ ಸಾಧ್ಯ, ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ರಾಜ್ಯ ಅಧ್ಯಕ್ಷರಾದ ಎನ್ ರಾಜ್ ಗೋಪಾಲ್ ರವರು ಸರ್ಕಾರಕ್ಕೆ ಮನವಿ ಮಾಡಿದರು.

 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರ ಸಾಧನೆಯನ್ನು ಗೌರವಿಸಿ  ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು ಇಂದು ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಾದ ಸಂದರ್ಭ ಬಂದು ಒದಗಿದೆ ಸಹನೆ ಧೈರ್ಯ, ತಾಳ್ಮೆಯಿಂದ ಒತ್ತಡದ ಪರಿಸ್ಥಿತಿ ನಿಭಾಯಿಸಿದಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಜಿಲ್ಲಾಧ್ಯಕ್ಷರಾದ ಶ್ರೀಮತಿ ಶಾರದಾ ಆರ್‌ಎಸ್‌ ರವರು ಅಭಿಪ್ರಾಯಪಟ್ಟರು.

 ವಿದ್ಯಾರ್ಥಿಗಳಿಗೆ ಶಿಕ್ಷಣ ಬರಿ ಪಠ್ಯಪುಸ್ತಕದ ಜ್ಞಾನವಲ್ಲ ಬದಲಾಗಿ ಮೌಲ್ಯಯುತ ಶಿಕ್ಷಣ ನೀಡದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸಲು ಶಿಕ್ಷಕರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಸ್ಥೆಯ ಅಧ್ಯಕ್ಷರಾದ ಬಿ ಶಿವರಾಂ ಶೆಟ್ಟಿ ಅಭಿಪ್ರಾಯಪಟ್ಟರು

 ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕರನ್ನ ಗೌರಿಸಲಾಯಿತು ಸಿಸ್ಟರ್ ರಿಜಿನಾ ಮೇರಿ ಶ್ರೀಯುತ ಅಣ್ಣೇಗೌಡ, ಸಿಸ್ಟರ್ ಮೋಲಿ,ಶ್ರೀಮತಿ ಜೆಪಿ ಇಂದ್ರಮ್ಮ ಇವರಿಗೆ ಜಿಲ್ಲಾ ಉತ್ತಮ ಪ್ರಶಸ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು, ಇದೆ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿ ಹೊಂದಿದಂತ ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಭೆಯಲ್ಲಿ ಗೌರವಿಸಲಾಯಿತು,

 ಕಾರ್ಯಕ್ರಮದಲ್ಲಿ ಶ್ರೀಯುತ ಸತೀಶ್ ಶ್ರಿಯುತ ಜಗದೀಶ್ ಜಿ ಸಿ, ಸುಬ್ರಾಯ್ ಗೌಡ್ರು ಎಪಿ ರಾಮಚಂದ್ರಗೌಡ ಬಿಪಿ ನಿಂಗಪ್ಪ,ರವಿನಾಯ್ಕ್ ಉಪಸ್ಥಿತರಿದ್ದರು, ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ  ಮುಖ್ಯೋಪಾಧ್ಯಾಯರು ಶಿಕ್ಷಕರು ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿಜೃಂಭಣೆಯಿಂದ ನಡೆದ ಕಡಗಲುನಾಡು ಶ್ರೀ ಮಳಲೂರಮ್ಮ ದೇವಿ ದಿವ್ಯ ರಥೋತ್ಸವ


ಚಿಕ್ಕಮಗಳೂರು ತಾಲ್ಲೂಕು ಆವತಿ ಹೋಬಳಿ ಮಲ್ಲಂದೂರು ಬ್ಯಾರವಳ್ಳಿ ಗ್ರಾಮದಲ್ಲಿ  ಐತಿಹಾಸಿಕ ಹಿನ್ನೆಲೆಯುಳ್ಳ ಕಡಗಲುನಾಡು ಶ್ರೀ ಮಳಲೂರಮ್ಮ ದೇವಿ ದಿವ್ಯ ರಥೋತ್ಸವ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.

ದಿನಾಂಕ 5.3.2026  ಗುರುವಾರದಂದು ಪ್ರಾರಂಭವಾದ ದಿವ್ಯ ರಥೋತ್ಸವದಲ್ಲಿ ಮೊದಲನೆಯ ದಿನ ದೇವಿಗೆ ಪಂಚಾಮೃತ ಅಭಿಷೇಕ, ಕಲಶ ಸ್ಥಾಪನೆ,ಉಡುಗೆ ಅಲಂಕಾರ, ವಿಶೇಷ ಪೂಜೆ ಮಹಾಮಂಗಳಾರತಿ, ರಾತ್ರಿ ಸಣ್ಣ ತೇರು ಉತ್ಸವ ನಡೆಯಿತು.

ಶುಕ್ರವಾರ ಮಹಾಪೂಜೆ ಮಹಾಮಂಗಳಾರತಿ ಹರಕೆ ಕಾಣಿಕೆ ಒಪ್ಪಿಸುವುದು, ಪ್ರಾರ್ಥನೆ,ಮಡಿಲಕ್ಕಿ ಸೇವೆ, ಹಣ್ಣು ಕಾಯಿಸೇವೆ, ಕುಂಕುಮಾರ್ಚನೆ,ಪ್ರಸಾದ ವಿನಿಯೋಗ, ಶನಿವಾರ

ದಿವ್ಯ ರಥೋತ್ಸವ ,ಕಡಗಲು ನಾಡು ಗ್ರಾಮಸ್ಥರಿಂದ ಆಯೋಜಿಸಲಾಗಿತ್ತು.ವಿಶೇಷ ಪ್ರಾರ್ಥನೆ ತೀರ್ಥ ಪ್ರಸಾದ ಅನ್ನಸಂತರ್ಪಣೆ ಮಹಾಮಂಗಳಾರತಿ ನಡೆಯಿತು ಕೊನೆಯ ದಿನವಾದ ಭಾನುವಾರ ಓಕುಳಿ ಪೂಜಾ ಕಾರ್ಯಕ್ರಮ ಮಹಾಮಂಗಳಾರತಿ, ಪ್ರಾರ್ಥನೆ ,ತೀರ್ಥ ಪ್ರಸಾದ ವಿನಿಯೋಗ, ಹಣ್ಣು ಕಾಯಿಸೇವೆ, ಪೂರ್ಣಗೊಂಡಿತು.

ಹೋಬಳಿಯ ಸುತ್ತಮುತ್ತಲಿನ ಹಲವು ಗ್ರಾಮ ಮತ್ತು ಹಳ್ಳಿಗಳಿಂದ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮೂಡಿಗೆರೆ ಟೈಲರ್ ಸಂಘದಿಂದ ಟೈಲರ್ ಡೇ ಕಾರ್ಯಕ್ರಮ

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಮೂಡಿಗೆರೆ ತಾಲೂಕು ನಗರ ಸಮಿತಿ ವತಿಯಿಂದ ಅದ್ದೂರಿ ಟೈಲರ್ ಡೇ ಕಾರ್ಯಕ್ರಮವನ್ನು ಪಟ್ಟಣದ ಬೆಳೆಗಾರರ ಸಂಘದ ಕಾಫಿ ಭವನದಲ್ಲಿ ಹಮ್ಮಿಕೊಳ‍್ಳಲಾಗಿತ್ತು.   

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ; ಆಧುನಿಕ  ದಿನಮಾನಗಳಲ್ಲಿ ಟೈಲರ್ ವೃತ್ತಿ ಬಾಂಧವರ ಬದುಕು ಬಹಳ ಸಂಕಷ್ಟದಲ್ಲಿದೆ ಹೊಲಿಗೆಯ ಕಡೆ ಆಸಕ್ತಿ ಕಡಿಮೆಯಾಗಿದೆ ರೆಡಿಮೇಡ್ ಬಟ್ಟೆಗಳ ಆಕರ್ಷಣೆಯಿಂದ ವೃತ್ತಿ ಬದುಕಿಗೆ ಸಂಕಷ್ಟ ಎದುರಾಗಿದೆ ಎಲ್ಲರೂ ಒಗ್ಗಟ್ಟಾಗಿ ಮುಂದುವರೆದು ವೃತ್ತಿಯನ್ನು ಕಾಪಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು  ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ. ಉದ್ಘಾಟನೆಯನ್ನು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಬಾಳೂರು ನೆರವೇರಿಸಿ ಮಾತನಾಡಿ ; ಟೈಲರ್ ವೃತ್ತಿ ಒಂದು ಶ್ರೇಷ್ಠವಾದ ಕೆಲಸ. ವ್ಯಕ್ತಿಯನ್ನು ಅಂದವಾಗಿ ಕಾಣುವಂತೆ ವಸ್ತ್ರಗಳನ್ನು ಹೊಲಿದು ಕೊಡುವ ಟೈಲರ್ ಗಳು ಒಂದು ರೀತಿಯಲ್ಲಿ ಸಮಾಜ ಸೇವಕರು. ಮೂಡಿಗೆರೆ ಟೈಲರ್ ಸಂಘವು ಕೇವಲ ವೃತ್ತಿಗೆ ಸೀಮಿತವಾಗದೇ, ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದರು.

 ಇದೇ ಸಂದರ್ಭದಲ್ಲಿ ಹಿರಿಯ ಟೈಲರ್ ವೃತ್ತಿಬಾಂಧವರಿಗೆ ಸನ್ಮಾನಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆ ನಗರ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಮಾಶಂಕರ ವಹಿಸಿದದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್  ಮತ್ತು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಿವಗೌಡ್ರು, ಸತೀಶ್, ಗಿರೀಶ್, ಗೋಪಾಲ ಶೆಟ್ಟಿ, ಷಣ್ಮುಖಾನಂದ, ಪ್ರಕಾಶ್, ಮಂಜುಳಾ, ಮಂಜು, ಎಂಎಸ್ ನಾಗರಾಜ್, ಸುರೇಶ್ ಮತ್ತು ಟೈಲರ್ ವೃತ್ತಿ ಬಾಂಧವರು ಉಪಸ್ಥಿತರಿದ್ದರು


ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಂದ ಮಾರ್ಚ್ 11 ರಂದು ಕರ್ನಾಟಕ ಸ್ವಾಭಿಮಾನ ನಡಿಗೆ

ನಾವು ಬದುಕಿದ್ದೇವೆ, ಅನ್ಯಾಯದ ವಿರುದ್ಧ ಪ್ರತಿರೋಧಿಸುತ್ತೇವೆ, ಅದಕ್ಕೆ ಹೆಮ್ಮೆಯಿಂದ ನಡೆಯುತ್ತಿದ್ದೇವೆ ಎಂಬ ಶೀರ್ಷಿಕೆಯಡಿ ಕರ್ನಾಟಕ ಸ್ವಾಭಿಮಾನ ನಡಿಗೆ ಕಾರ್ಯಕ್ರಮವನ್ನು ಮಾ.11 ರಂದು ಹಮ್ಮಿಕೊಳ್ಳಲಾಗಿದೆ ಎಂದು ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ ಮುಖಂಡ ಮೇಘ ಮಲ್ನಾಡ್ ಹೇಳಿದರು.

ಅವರು ಚಿಕ್ಕಮಗಳೂರಿನಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.11 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಆಜಾದ್ ಪಾರ್ಕ್ನಿಂದ ನಡಿಗೆ ಆರಂಭವಾಗಿ ಬೋಳರಾಮೇಶ್ವರ ದೇವಸ್ಥಾನದ ಬಳಿಯಿರುವ ಸರ್ಕಾರಿ ನೌಕರರ ಭವನದಲ್ಲಿ ಮಧ್ಯಾಹ್ನ 12-30ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

1969 ರಲ್ಲಿ ಅಮೇರಿಕಾದ ನ್ಯೂಯಾರ್ಕ್ ನಗರದ ಗ್ರೀನ್ವಿಚ್ ಪ್ರದೇಶದ ಸ್ಟೋನ್ವಾಲ್ ಇನ್ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿದರು. ಪೊಲೀಸರ ನಿರಂತರ ಕಿರುಕುಳದಿಂದ ಬೇಸತ್ತ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ದಾಳಿಗೆ ಪ್ರಬಲವಾಗಿ ಪ್ರತಿರೋಧಿಸಿದ್ದು, ಘಟನೆಯನ್ನು ಸ್ಟೋನ್ವಾಳ್ ದಂಗೆ ಎಂದು ಪ್ರಸಿದ್ದಿ ಪಡೆಯಿತು ಎಂದು ಹೇಳಿದರು.

ಜಗತ್ತಿನಾದ್ಯಂತ ಆಧುನಿಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಚಳುವಳಿಯ ಆರಂಭವೆಂದು ಪರಿಗಣಿಸಲಾಗಿದ್ದು, ಹಿನ್ನೆಲೆಯಲ್ಲಿ ಪ್ರತಿ ವರ್ಷ ಸಮುದಾಯ ಮತ್ತು ಬೆಂಬಲಿಗರು ಸ್ವಾಭಿಮಾನ ಕಾರ್ಯಕ್ರಮಗಳನ್ನು ಆಯೋಜಿಸಿ ಮೆರವಣಿಗೆಗಳನ್ನು ನಡೆಸುತ್ತಿದ್ದು, ಚಿಕ್ಕಮಗಳೂರಿನಲ್ಲಿ ಎರಡನೇ ಬಾರಿ ಸ್ವಾಭಿಮಾನ ನಡಿಗೆಯನ್ನು ಆಯೋಜಿಸಲಾಗಿದೆ ಎಂದರು.

ಸಾಲಿನ ರಾಜ್ಯ ಬಜೆಟ್ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಯಾವುದೇ ಹೊಸ ಅನುದಾನ ಅಥವಾ ಸಮಗ್ರ ಕಾರ್ಯಕ್ರಮಗಳನ್ನು ಘೋಷಿಸದೇ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿರುವುದನ್ನು ಖಂಡಿಸಲಾಗುವುದು ಎಂದು ಹೇಳಿದರು.

ಫಾತಿಮತ್ ಮಾತನಾಡಿ, ಕರ್ನಾಟಕ ಲಿಂಗತ್ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಸರ್ವತೋಮುಖ ಅಭಿವೃದ್ಧಿಗಾಗಿ ಕನಿಷ್ಠ 250 ಕೋಟಿ ಪ್ರತ್ಯೇಕ ಬಜೆಟ್ ನೀಡಬೇಕು. ವಸತಿ ಹಾಸ್ಟೇಲ್ ಮತ್ತು ಶಾರ್ಟ್ ಸ್ಟೇ ಹೋಮ್ಗಳನ್ನು ತಕ್ಷಣ ಒದಗಿಸುವಂತೆ ಒತ್ತಾಯಿಸಿದರು.

ಜೀವನೋಪಾಯ, ಆಹಾರ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಪ್ರತಿ ವರ್ಷ ಕನಿಷ್ಠ 500 ಮನೆಗಳನ್ನು ಹಂಚಿಕೆ ಮಾಡಬೇಕು. ಕೃಷಿಯಲ್ಲಿ ಆಸಕ್ತಿ ಹೊಂದಿರುವ ಪ್ರತಿ ವ್ಯಕ್ತಿಗೆ 2 ಎಕರೆ ಕೃಷಿ ಯೋಗ್ಯ ಭೂಮಿಯನ್ನು ನೀಡಬೇಕು. ಗೋಮಾಳ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಹಂಚಿಕೆ ಮಾಡುವಂತೆ ಮನವಿ ಮಾಡಿದರು.

ಉದ್ಯಮಶೀಲತೆಗೆ ಬ್ಯಾಂಕ್ ಲಿಂಕ್ ಆಧಾರಿತ ಯೋಜನೆ ಜಾರಿಗೆ ತಂದು ಪ್ರತಿ ವ್ಯಕ್ತಿಗೆ 2 ಲಕ್ಷ ಸಬ್ಸಿಡಿ ನೀಡಬೇಕು. ಸ್ವಸಹಾಯ ಗುಂಪುಗಳನ್ನು ರಚಿಸಲು ಮತ್ತು ಬಲಪಡಿಸಲು ಸಮುದಾಯ/ಸರ್ಕಾರೇತರ ಸಂಸ್ಥೆಗಳಿಗೆ ಅನುದಾನ ನೀಡಬೇಕು. ಬಡ್ಡಿರಹಿತ ಸಾಲ ಒದಗಿಸಬೇಕು. ಮೈತ್ರಿ ಪಿಂಚಣಿಯನ್ನು ತಿಂಗಳಿಗೆ 2 ಸಾವಿರಕ್ಕೆ ಹೆಚ್ಚಿಸಬೇಕೆಂದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ತಿಂಗಳಿಗೆ 5 ಸಾವಿರ ವೃದ್ಧಾಪ್ಯ ಪಿಂಚಣಿ ನೀಡಬೇಕು. ಶೇ.1 ಮೀಸಲಾತಿಯನ್ನು ಕೇವಲ ಘೋಷಣೆಯಾಗಿ ಉಳಿಸದೆ, ಸರ್ಕಾರಿ ಉದ್ಯೋಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ಕೋಚಿಂಗ್ ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಲಿಂಗತ್ವ ಮತ್ತು ಅಲ್ಪಸಂಖ್ಯಾತರಿಗಾಗಿ ಕನಿಷ್ಠ ಒಂದು ವಿಶೇಷ ಆರೋಗ್ಯ ಕೇಂದ್ರ ತೆರೆಯುವಂತೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್, ಪ್ರೀತಂ, ಆದಿಲ್ ಮತ್ತಿತರಿದ್ದರು.

ಪರಿಶಿಷ್ಟರಿಗೆ ಪ್ರಯೋಜವಾಗದ ಬಜೆಟ್ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಆರೋಪ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ರೀತಿಯ ಅನುಕೂಲ ಆಗದ ಬಜೆಟ್ ಮಂಡಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ ಆರೋಪಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ದಲಿತ ನಾಯಕ, ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಎಸ್ಸಿಪಿ, ಟಿಎಸ್ಪಿಯ 44 ಸಾವಿರ ಕೋಟಿಯನ್ನು ಪಂಚ ಗ್ಯಾರಂಟಿ ಯೋಜನೆಗೆ ಬಳಸುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಹಿಂದೆ ಇದ್ದಂತಹ ಗಂಗಾ ಕಲ್ಯಾಣ, ನೇರ ಸಾಲ ಅವರ ಅವಧಿಯಲ್ಲಿ ಕೊಟ್ಟ ಹಣ ಎಷ್ಟು ದಲಿತ ನಾಯಕರೆಂದು ಇವರು ಕೊಡುತ್ತಿರುವ ಹಣವೆಷ್ಟು, ಇವರಿಗೆ ದಲಿತರ ಮೇಲೆ ಕಾಳಜಿ ಇದ್ದರೆ ಭೂಮಿ ಇಲ್ಲದಿರುವ ದಲಿತರಿಗೆ ನೇರವಾಗಿ ಭೂಮಿಯನ್ನು ಕೊಂಡುಕೊಳ್ಳುವ ವ್ಯವಸ್ಥೆ ಮಾಡಲಿ ಎಂದರು.

ದಲಿತ ಸಂಘಟನಾ ಹೋರಾಟಗಾರರು ಯಾರೇ ತಪ್ಪು ಮಾಡಿದರೂ ಅದನ್ನು ಖಂಡಿಸಬೇಕು. ಯಾವುದೇ ಪಕ್ಷದ ನಾಯಕರು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಸ್ವಾಗತಿಸಬೇಕು. ದಲಿತ ನಾಯಕರುಗೆ ಎಂಎಲ್ಸಿ ಮಾಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದರು, ಅದರಲ್ಲಿ ಅಂಬೇಡ್ಕರ್ ವಾದ ಮಾವಳ್ಳಿ ಶಂಕರ್ ಒಬ್ಬರು ಎಂದು ತಿಳಿಸಿದರು.

ದಲಿತ ಸಮಾಜದ ಸಮುದಾಯಕ್ಕೆ ಅನ್ಯಾಯವಾದರೂ ಕೂಡ ಅವರು ಎಂಎಲ್ಸಿ ಆಗುವ ಸ್ವಾರ್ಥಕ್ಕೆ ದಲಿತರಿಗೆ ಯಾವ ಅನುಕೂಲವಾಗದ ಬಜೆಟ್ ಘೋಷಣೆ ಮಾಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಕೃಷ್ಣಪ್ಪ ಬಣ ಖಂಡಿಸುತ್ತದೆ ಎಂದರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ್, ಕರವೇ ಜಿಲ್ಲಾ ಸಂಚಾಲಕಿ ಪೂರ್ಣಿಮಾ, ಡಿಎಸ್ಎಸ್ ತಾಲ್ಲೂಕು ಸಂಚಾಲಕ ವಿಜಯ್, ಮುಖಂಡ ಸಚಿನ್ ಉಪಸ್ಥಿತರಿದ್ದರು.

ಮೂಡಿಗೆರೆ : ನ್ಯಾ.ನಾಗಮೋಹನ್ ದಾಸ್ ಅವೈಜ್ಞಾನಿಕ ವರದಿಯನ್ನು ಖಂಡಿಸಿ ಮಾರ್ಚ್ 13 ರಂದು ಬಲಗೈ ಯುವ ಒಕ್ಕೂಟದಿಂದ ಪಂಜಿನ ಮೆರವಣಿಗೆ : ಬಾನುಪ್ರಕಾಶ್

ಬಾಬಾಸಾಹೇಬ್ ಅಂಬೇಡ್ಕರ್ ರವರ ನಿರಂತರ ಶ್ರಮದ ಫಲವಾಗಿ ದೇಶಕ್ಕೆ ನೀಡಿದ ಸಂವಿಧಾನದಿಂದಾಗಿ ದೊರೆತ ಮೀಸಲಾತಿಯಿಂದ ಒಂದೆರಡು ತಲೆಮಾರಿನಿಂದ ಶಿಕ್ಷಣ, ಉದ್ಯೋಗಗಳಲ್ಲಿ ಅವಕಾಶವನ್ನು ಪಡೆದು ಪರಿಶಿಷ್ಠ ಸಮುದಾಯ ಸಮಾಜದ ಮಂಚೂಣಿಗೆ ಬರುತ್ತಿರುವುದನ್ನು ಸಹಿಸದ ಜಾತಿವಾದಿಗಳು ಒಳಮೀಸಲಾತಿ ಹೆಸರಿನಲ್ಲಿ ಆದಿಕರ್ನಾಟಕ ಆದಿ ದ್ರಾವೀಡ, ಆದಿ ಆಂದ್ರ, ಹಾಗೂ ಬಲಗೈ ಸಂಬಂಧಿತ ಜಾತಿಗಳನ್ನು ಮೀಸಲಾತಿಯಿಂದ ಹೊರಗಿರಿಸುವ ನ್ಯಾ.ನಾಗಮೋಹನ್ ದಾಸ್ ಅವೈಜ್ಞಾನಿಕ ವರದಿಯನ್ನು ಖಂಡಿಸಿ ಮಾರ್ಚ್ 13 ಶುಕ್ರವಾರದಂದು ಸಂಜೆ ಪಂಜಿನ ಮೆರವಣಿಗೆ ನಡೆಸುತ್ತಿರುವುದಾಗಿ ಬಲಗೈ ಸಮುದಾಯಗಳ ಯುವ ಒಕ್ಕೂಟದ ಸಂಚಾಲಕ ಬಾನುಪ್ರಕಾಶ್ ಹೆಸಗಲ್ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ತಾಲ್ಲೂಕಿನಲ್ಲಿ 80 ಸಾವಿರಕ್ಕೂ ಅಧಿಕ ಜನ ಸಂಖ್ಯೆಯನ್ನು ಹೊಂದಿರುವ ಬಲಗೈ ಸಮುದಾಯಗಳಿಗೆ ಮತ್ತು ರಾಜ್ಯಾದಾದ್ಯಂತ ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಬಲಗೈ ಸಮುದಾಯಕ್ಕೆ ನ್ಯಾ.ನಾಗಮೋಹನ ದಾಸ್ ಅವೈಜ್ಞಾನಿಕ ವರದಿಯಿಂದ ಬಹಳ ಅನ್ಯಾಯವಾಗುತ್ತಿದ್ದು, ಪ್ರಥಮವಾಗಿ ಮೂಡಿಗೆರೆ ಮೀಸಲು ಕ್ಷೇತ್ರದಿಂದಲೇ ಹೋರಾಟವನ್ನು ಆರಂಬಿಸಿದ್ದು ಮಾರ್ಚ್ 13 ರಂದು ಪಂಜಿನ ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಮೈಸೂರಿನ ಅತಿಥಿ ಉಪನ್ಯಾಸಕರಾದ ಡಾ.ರಮೇಶ್ ರವರ ದಿಕ್ಸೂಜಿ  ಭಾಷಣ ಮಾಡಲಿದ್ದು ಸಾರ್ವಜನಿಕರು ಮತ್ತು ಸಮುದಾಯದ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಮನವಿಗೊಂಡರು.

ರಾಘವೇಂದ್ರ ಚಿನ್ನಿಗ ಮಾತನಾಡಿ. ನಮ್ಮ ಹಕ್ಕುಗಳನ್ನು ನಾವು ಕೇಳಬೇಕಾದರೆ ಯಾರಿಗೂ ಮುಲಾಜು ಮಾಡೋಲ್ಲಾ. ಇಲ್ಲಿ ಬಲಗೈ ಸಮುದಾಯದ ನಾಲ್ಕು ಜನ ಎಂಎಲ್ ಗಳಿದ್ದರೂ ಸಹ ಜಾತಿಯ ಸಮೀಕ್ಷೆ ಸಂಬಂಧದಲ್ಲಿ ಸಹಿತ ಯಾರು ಮಾರ್ಗದರ್ಶನ ಮಾಡಿಲ್ಲ. ನಾಳೆ ನಮ್ಮ ಮಕ್ಕಳ ಭವಿಷ್ಯಕ್ಕೆ ಮತ್ತು ನಾಳಿನ ಭವಿಷ್ಯಕ್ಕೊಸ್ಕರ ನಾವು ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು.

ಸುಂದರೇಶ್ ಹೊಯ್ಸಳಲು ಮಾತನಾಡಿ. ಬಲಗೈ ಸಮುದಾಯಕ್ಕೆ ಬಹಳಷ್ಟು ಅನ್ಯಾಯವಾಗುತ್ತಿದೆ. ನಾಗಮೋಹನ್ ದಾಸ್ ವರದಿ  ವೈಜ್ಞಾನಿಕವಾಗಿ ಪರಿಗಣನೆ ಆಗಿಲ್ಲ. ಈಗ ಸಾಮಾನ್ಯವಾಗಿ ಎಲ್ಲರೂ ಕೂಡ ವಿದ್ಯಾವಂತರಾಗಿದ್ದಾರೆ. ಎಲ್ಲರಿಗೂ ಅಂಕಿ ಅಂಶಗಳ, ಸಾಧಕ ಬಾಧಕಗಳು ಗೊತ್ತಿರುತ್ತದೆ  ಅಂತದರಲ್ಲೂ ಬಲಗೈ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ.ಅಸ್ಪರ್ಶರ ಪರವಾಗಿ ಅವರ ನೋವು ನಲಿವುಗಳಲ್ಲಿ ಸ್ಪಂದಿಸದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ವರದಿಯ ¨ಗ್ಗೆ ವಿಶ್ಲೇಷಣೆ ಅಗತ್ಯವಾಗಿದೆ ಎಂದರು. ನೈಜವಾದ ಅಸ್ಪರ್ಶ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ನ್ಯಾಯಕೊಡಿಸುವ ಕೆಲಸವಾಗಬೇಕಾಗಿದೆ ಎಂದರು.

ಡಾ.ಅರುಣ್ಕುಮಾರ್ ಹಾಂದಿ ಮಾತನಾಡಿ. ವರದಿಯಲ್ಲಿ ಲಂಬಾಣಿ ಮತ್ತು ಬೋವಿಗಳನ್ನು ತೆಗೆದುಕೋಂಡು ಬಂದು ಸೇರಿಸಿ ಹಾಕಿದ್ದರ ಪರಿಣಾಮ ಬಲಗೈ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ. ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಬೇಕು. ಪ್ರಸ್ತುತ ನೀಡುತ್ತಿರುವ ಜಾತಿ ಪ್ರಮಾಣ ಪತ್ರದಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳಿಗೆ ಅನಾನು ಕೂಲವಾಗುತ್ತಿದ್ದು ಕೂಡಲೇ ಇದನ್ನು ರದ್ದುಗೊಳಿಸಿ ಹಿಂದಿನಂತೆಯೇ ಆದಿ ಕರ್ನಾಟಕ ಪರಿಶಿಷ್ಟ ಜಾತಿ ಎಂದು ಕೂಡಲೇ ಸರ್ಕಾರ ಆದೇಶಿಸಬೇಕು. ಉದ್ಯೋಗದಲ್ಲಿ ರೋಷ್ಟರ್ ಬಿಂದುವಿನಲ್ಲಿ ಆಗಿರುವ ಲೋಪದೋಷಗಳನ್ನು ಸರಿ ಪಡಿಸಬೇಕು.  ಬಲಗೈ ಸಮುದಾಯದ ಸಚಿವರು, ಶಾಸಕರ ಮೇಲೆ ಬೇರೆ ಯಾರು ಕೂಡ ಒತ್ತಡ ಹೇರದಂತೆ ತಡೆದು, ಅವಹೇಳನವಾಗಿ ನಿಂದಿಸುವುದನ್ನು ಕೂಡಲೇ ನಿಲ್ಲಿಸಬೇಕು. ಕೇಂದ್ರ ಸರ್ಕಾರ ಸ್ಪರ್ಷ ಜಾತಿಗಳನ್ನು ಅಸ್ಪøಸ್ಯ ಜಾತಿಗಳ ಪಟ್ಟಿಗೆ ಸೇರಿಸಿದ್ದು, ಕೂಡಲೇ ಸ್ಪರ್ಷ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬೀಡಬೇಕು. ಲಂಬಾಣಿ, ಬೋವಿ ಇತ್ಯಾದಿ, ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತವಾಗಿರುವ ಬಲಗೈ ಸಮುಧಾಯದವರಿಗೆ ಎಲ್ಲಾ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕೆಂಬ ಹಕ್ಕೋತ್ತಾಯಗಳನ್ನು ಮಂಡಿಸುವುದಾಗಿ ತಿಳಿಸಿದರು.

ಸಂದರ್ಭದಲ್ಲಿ ವೆಂಕಟೇಶ್ ಉಪಸ್ಥಿತರಿದ್ದರು