Friday, 6 March 2026

ಚಿಕ್ಕಮಗಳೂರು : ಪರವಾನಗಿ ಪಡೆಯದ ಅಂಗಡಿಗಳಿಗೆ ನಗರಸಭೆಯಿಂದ ಬೀಗ

ಚಿಕ್ಕಮಗಳೂರು ನಗರದ ವರ್ತಕರು ಅಧಿಕೃತ ಶುಲ್ಕ ಪಾವತಿಸಿ ನಗರಸಭೆಯಿಂದ ನಿಗದಿತ ಉದ್ದಿಮೆ ಪರವಾನಗಿ ಪಡೆಯುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಬಿ.ಸಿ ಬಸವರಾಜ್ ಮನವಿ ಮಾಡಿದರು.

ಅವರು ಶುಕ್ರವಾರ  ನಗರದ ಮುಖ್ಯ ರಸ್ತೆಗಳಾದ ಎಂ.ಜಿ ರಸ್ತೆಯ ಸಂಗೀತ ಮೊಬೈಲ್ ಅಂಗಡಿಯವರು ನಗರಸಭೆ ವತಿಯಿಂದ ಪರವಾನಗಿ ತೆಗೆದುಕೊಳ್ಳದೆ ವ್ಯವಹಾರ ಮಾಡುತ್ತಿರುವುದರಿಂದ ಬೀಗ ಹಾಕಲಾಯಿತು ಮತ್ತು ಐ.ಜಿ ರಸ್ತೆಗಳಲ್ಲಿ ನಗರಸಭೆಯಿಂದ ನಿರ್ಮಾಣ ಮಾಡಿರುವ ರಸ್ತೆ ಮತ್ತು ಪುಟ್ಪಾತನ್ನು ಒತ್ತುವರಿ ಮಾಡಿ ವ್ಯಾಪಾರದ ಸರಕು-ಸರಂಜಾಮುಗಳನ್ನು ಜೋಡಿಸಿಕೊಂಡು ಜೊತೆಗೆ ಬೋರ್ಡ್‍ಗಳನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ಪರಿಗಣಿಸಿ ತೆರವುಗೊಳಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.

ಕಳೆದ ಐದಾರು ವರ್ಷಗಳಿಂದ ಉದ್ದಿಮೆ ಪರವಾನಗಿ ಪಡೆಯದೆ ಅಂಗಡಿಗಳನ್ನು ನೆಡೆಸುತ್ತಿರುವ ವರ್ತಕರಿಗೆ ಅನೇಕ ಬಾರಿ ನೋಟಿಸ್ ನೀಡಿ ತಿಳುವಳಿಕೆ ಮೂಡಿಸಿದ್ದರು ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಿ ಉದ್ದಿಮೆ ಪರವಾನಗಿ ನವೀಕರಿಸಿಕೊಂಡಿರುವುದಿಲ್ಲ ಈ ಹಿನ್ನಲೆಯಲ್ಲಿ ಎಂ.ಜಿ ರಸ್ತೆಯ 4 ಅಂಗಡಿಗಳಿಗೆ ಬೀಗ ಹಾಕಿ ಬಂದ್ ಮಾಡಿಸಿದ್ದೇವೆ ಎಂದು ಎಚ್ಚರಿಸಿದರು.

ನಗರದ 25 ಅಂಗಡಿಗಳಿಗೆ ಪರವಾನಗಿಯನ್ನು ವಿತರಿಸಿ 2 ಲಕ್ಷಕ್ಕೂ ಅಧಿಕ ಪರವಾನಗಿ ಶುಲ್ಕವನ್ನು ಪಡೆಯಲಾಗಿದೆ. ನಗರಸಭೆ ಅಧಿಕಾರಿಗಳು ಉದ್ದಿಮೆಗಳಿಗೆ ಬಂದು ಗೊಂದಲ ಸೃಷ್ಠಿಸುವ ಮುನ್ನ ತಮ್ಮ ಉದ್ದಿಮೆಗಳ ಪರವಾನಗಿಯನ್ನು ಪಡೆಯಬೇಕೆಂದು ಸೂಚಿಸಿದರು,

ಇಂದಿನಿಂದ ನಾಲ್ಕು ದಿನಗಳ ಕಾಲ ನಗರದ ಎಲ್ಲಾ ಅಂಗಡಿಗಳಿಗೆ ಬೇಟಿ ನೀಡಿ ಶುಲ್ಕ ಪಾವತಿಸಿಕೊಂಡು ಪರವಾನಗಿ ವಿತರಿಸುವ ಕಾರ್ಯವನ್ನು ಕೈಗೊಂಡಿದ್ದು, ವಾರ್ಡ್ ವಾರು ಆರೋಗ್ಯ ನಿರೀಕ್ಷಕರನ್ನು ನೇಮಿಸಲಾಗಿದ್ದು ಸಾರ್ವಜನಿಕರು ಅವರ ಬಳಿ ಶುಲ್ಕ ಪಾವತಿಸಿ ರಶೀದಿ ಪಡೆಯಬೇಕೆಂದು ತಿಳಿಸಿದರು.

ನಗರದಲ್ಲಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳಿಲ್ಲ ಪಕ್ಕದ ಹಾಸನ, ಶಿವಮೊಗ್ಗ, ಭದ್ರಾವತಿಯಿಂದ ರಾತ್ರಿ ಸಮಯದಲ್ಲಿ ನಗರಕ್ಕೆ ಪ್ಲಾಸ್ಟಿಕ್ ಸರಬರಾಜು ಆಗುತ್ತಿದೆ, ಪರಿಶೀಲನೆ ನೆಡೆಸಿ ಕ್ರಮ ಕೈಗೊಂಡರು, ನಿಯಂತ್ರಣಕ್ಕೆ ತರುವುದು ಕಷ್ಟಸಾಧ್ಯವಾಗುತ್ತಿದೆ ಎಂದು ವಿಷಾಧಿಸಿದರು.

ಈಗಾಗಲೇ ನಗರಸಭೆಯಿಂದ ಪ್ಲಾಸ್ಟಿಕ್ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮೂಲದಲ್ಲೇ ಸರ್ಕಾರ ಪ್ಲಾಸ್ಟಿಕ್ ನಿಷೇದಿಸಬೇಕೆಂದು ಮನವಿ ಮಾಡಿದರು.

ನಾಲ್ಕು ತಂಡಗಳ ಮೂಲಕ ನಗರದಲ್ಲಿ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ, ಇದರ ಉಸ್ತವಾರಿ ನೋಡಿಕೊಳ್ಳಲು ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಇವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ವಾಹನಗಳ ತೊಂದರೆಯಿಂದಾಗಿ ನಗರದ ಕೆಲವು ವಾರ್ಡ್‍ಗಳಲ್ಲಿ ಕಸ ಸಂಗ್ರಹಣೆ ಮಾಡಲಾಗುತ್ತಿಲ್ಲ, ದಿನ ಬಿಟ್ಟು ದಿನ ಕಸ ಸಂಗ್ರಹಣೆ ಮಾಡಲಾಗುತ್ತಿದೆ ಮುಂದೆ ಪ್ರತಿದಿನ ಕಾರ್ಯಾರಂಭ ಮಾಡುತ್ತೇವೆ, ಶೇ 80 ರಷ್ಟು ನಾಗರೀಕರು ಮನೆ-ಮನೆ ಕಸವನ್ನು ವಿಂಗಡಣೆ ಮಾಡಿಕೊಡುತ್ತಿದ್ದು, ಉಳಿದ ಶೇ 20 ರಷ್ಟು ನಾಗರೀಕರು ಪ್ರತ್ಯೇಕಿಸಿ ನೀಡಿದರೆ ಕಸ ಸಂಗ್ರಹಣೆ ಕಾರ್ಯ ಸುಗಮವಾಗಲಿದೆ ಎಂದರು.


ಈ ಸಂದರ್ಭದಲ್ಲಿ ಪರಿಸರ ಅಭಿಯಂತರರಾದ ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ನಾಗಪ್ಪ, ರಂಗಪ್ಪ, ಈಶ್ವರ್, ಮೇಲ್ವಿಚಾರಕರಾದ ಅಣ್ಣಯ್ಯ, ಶ್ರೀನಿವಾಸ, ವಿವೇಕ್, ಮುರಗೇಶ್, ಸತೀಶ್, ರಮೇಶ್ ಉಪಸ್ಥಿತರಿದ್ದರು.

No comments:

Post a Comment