ನಗರದ ಕುವೆಂಪು
ಕಲಾಮಂದಿರದಲ್ಲಿ ಮಂಗಳವಾರ ಕೈವಾರ ತಾತಯ್ಯನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿರುವ ಕೈವಾರ ಪುಣ್ಯಕ್ಷೇತ್ರಕ್ಕೆ ದ್ವಾಪರ ಯುಗದಲ್ಲಿ ಏಕಚಕ್ರ ನಗರ ಎಂಬ ಹೆಸರಿತ್ತು.
ಪಾಂಡವರು ವನವಾಸದಲ್ಲಿದ್ದಾಗ ಈ ಭಾಗಕ್ಕೆ ಭೇಟಿ ನೀಡಿದ್ದರು. ಅಲ್ಲಿರುವ ಭೀಮಲಿಂಗೇಶ್ವರ ದೇವಸ್ಥಾನವನ್ನು
ಭೀಮನೇ ಸ್ಥಾಪಿಸಿದ ಎಂಬ ಇತಿಹಾಸವಿದೆ ಎಂದು ತಿಳಿಸಿದರು.
ತಾತಯ್ಯನವರು
ಬಡವರಿಗೆ ಮತ್ತು ಜನಸಾಮಾನ್ಯರಿಗೆ ಭಕ್ತಿ ಹಾಗೂ ಧರ್ಮದ ಶ್ರದ್ಧೆಯನ್ನು ಕಲಿಸಿಕೊಟ್ಟಿದ್ದಾರೆ. ಬಲಿಜ
ಜನಾಂಗದವರು ಅವರನ್ನು ಕುಲದೈವದಂತೆ ಪೂಜಿಸಿದರು. ಅವರ ಬೋಧನೆಗಳು ಮತ್ತು ಕಾಲಜ್ಞಾನದ ನುಡಿಗಳು ಸಾರ್ವಕಾಲಿಕವಾಗಿದ್ದು
ಎಲ್ಲರಿಗೂ ಅನ್ವಯಿಸುತ್ತವೆ ಎಂದರು.
ಲೋಕದ ನಡವಳಿಕೆಯನ್ನು
ವಿಡಂಬಿಸುತ್ತಿದ್ದ ತಾತಯ್ಯನವರು ಮನುಷ್ಯ ಕೆಟ್ಟದಕ್ಕೆ ಬೇಗ ಆಕರ್ಷಿತನಾಗುತ್ತಾನೆ ಎಂಬುದನ್ನು ಮಾರ್ಮಿಕವಾಗಿ
ಹೇಳುತ್ತಿದ್ದರು. ಮದ್ಯದ ಅಂಗಡಿಯ ಮುಂದೆ ಜನ ಜಂಗುಳಿ ಸೇರುತ್ತದೆ. ಆದರೆ ಜೀವ ಉಳಿಸುವ ಮಜ್ಜಿಗೆ,
ಹಾಲು ಮಾರುವ ಜಾಗದಲ್ಲಿ ಯಾರೂ ಸುಳಿಯುವುದಿಲ್ಲ. ಅಂದರೆ ಲೋಕದಲ್ಲಿ ಒಳ್ಳೆಯ ವಸ್ತುಗಳು ತಿರಸ್ಕಾರಕ್ಕೆ ಒಳಗಾಗಿ, ಕೆಟ್ಟದ್ದೇ ಮುಖ್ಯವಾಗುತ್ತಿದೆ ಎಂದು ಕೈವಾರ ತಾತಯ್ಯನವರು
ಅಂದೇ ಖೇದ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ ಅವರು, ಮನುಷ್ಯನ ಅಂತರಾತ್ಮವನ್ನು ಎಚ್ಚರಿಸುವ ತಾತಯ್ಯನವರ
ತತ್ವಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಉಪ ತಹಸೀಲ್ದಾರ್
ರಾಮರಾವ್ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಲದೇವ ಅಮರ ನಾರಾಯಣರ ಕೃಪೆಯಿಂದ ಬಲಿಜ ಜನಾಂಗದಲ್ಲಿ
ಜನಿಸಿದ ಯೋಗಿ ನಾರೇಯಣರು, ಭಗವಂತನ ಸಾಕ್ಷಾತ್ಕಾರ ಪಡೆದ ಮಹಾನ್ ಸಂತ ಹಾಗೂ ಕಾಲಜ್ಞಾನಿಗಳಾಗಿದ್ದರು.
ಸುಮಾರು 110 ವರ್ಷಗಳ ಕಾಲ ಭಕ್ತಿ ಭಾವದ ಮೂಲಕ ಜನರಿಗೆ ವೇದಾಂತ ವಿಷಯಗಳನ್ನು ಬೋಧಿಸುತ್ತಾ, ದೈವಿಕ
ಪವಾಡಗಳನ್ನು ಮಾಡುತ್ತಾ ಸಮಾಜಕ್ಕೆ ಸನ್ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಕಾಲಜ್ಞಾನವನ್ನು ರಚಿಸಿದ
ಇವರು ತೋರಿದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.
ಕೈವಾರ ತಾತಯ್ಯನವರ
ಕುರಿತು ಸಾಹಿತಿ ಬಿ.ತಿಪ್ಪೇರುದ್ರಪ್ಪ ಅವರು ಉಪನ್ಯಾಸ ನೀಡಿ, ತಾತಯ್ಯನವರ ಜೀವನದ ಮಹತ್ವದ ಘಟ್ಟಗಳನ್ನು
ವಿವರಿಸಿದರು. ಜೀವನದ ಸಂಕಷ್ಟದ ಸಮಯದಲ್ಲಿ ಅಮರೇಶ ನಾರಾಯಣನನ್ನು ಪ್ರಾರ್ಥಿಸಿದ ನಾರಾಯಣಪ್ಪನವರಿಗೆ
ಪರದೇಶಪ್ಪ ಸ್ವಾಮಿಗಳ ದರ್ಶನವಾಗಿ, ಅವರಿಂದ ಅಷ್ಟಾಕ್ಷರಿ ಮಂತ್ರೋಪದೇಶ ಲಭಿಸಿತು. ಗುರುಗಳು ನೀಡಿದ
ಬೆಣಚುಕಲ್ಲು ಯಾವಾಗ ಬಾಯಲ್ಲಿ ಸಿಹಿಯಾಗುತ್ತದೆಯೋ ಅಂದು ಯೋಗಸಿದ್ಧಿಯಾಗುತ್ತದೆ ಎಂದು ಆಡಿದ್ದ ಮಾತಿನಂತೆ
ಅವರಿಗೆ ಸಿದ್ಧಿ ದೊರೆಯಿತು. ತಾತಯ್ಯನವರು ಕಲ್ಲು ಮಣ್ಣಿನ ಗುಡಿಗಿಂತ ಜನ್ಮ ನೀಡಿದ ತಂದೆ-ತಾಯಿಯರನ್ನು
ಪೂಜಿಸುವುದೇ ನಿಜವಾದ ಭಕ್ತಿ ಎಂದು ಸಾರಿದರು.
ಸಂಸಾರ ಎಂಬುದು
ಗಾಳಿಗೆ ಸಿಕ್ಕ ದೀಪದಂತೆ ಅಸ್ಥಿರವೆಂದು ಭಾವಿಸಿದ ಅವರು, ಲೌಕಿಕ ಜೀವನದಿಂದ ದೂರವಾಗಿ ಕೈವಾರದ ನರಸಿಂಹ
ಗುಹೆಯಲ್ಲಿ ಮೂರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದರು. ಅವರು ಅಂದೇ ನುಡಿದಿದ್ದ ಕಾಲಜ್ಞಾನದ ಮಾತುಗಳಾದ
ವ್ಯಾಪಾರದಲ್ಲಿ ದ್ರೋಹ, ಸ್ವಾರ್ಥ ರಾಜಕಾರಣ, ಆಹಾರ ಮಾಲಿನ್ಯ, ಕೃಷಿ ಭೂಮಿ ನಾಶ ಮತ್ತು ಜಾತಿ ಸಂಘರ್ಷಗಳು
ಇಂದಿನ 21ನೇ ಶತಮಾನದಲ್ಲಿ ನಿಜವಾಗುತ್ತಿವೆ ಎಂದು ತಿಪ್ಪರುದ್ರಪ್ಪ ಅವರು ಪ್ರತಿಪಾದಿಸಿದರು.
ಬಲಿಜ ಸಮಾಜದ ಜಿಲ್ಲಾಧ್ಯಕ್ಷ ಆನಂದ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ಶೆಟ್ಟಿ, ಟ್ರಸ್ಟಿನ ಖಜಾಂಚಿ ಪೂಜಾರ ಮಂಜಪ್ಪ, ತಾಲ್ಲೂಕು ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಮಹೇಶ್ ಬಾಬು, ಕಾರ್ಯದರ್ಶಿ ಕೆ.ಬಿ.ಗಿರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯ ಹೆಚ್.ವೈ.ಮೋಹನ್ ಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಉಪಸ್ಥಿತರಿದ್ದರು.
No comments:
Post a Comment