ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರ
ಸಾಧನೆಯನ್ನು ಗೌರವಿಸಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು
ಪ್ರಧಾನ ಮಾಡಲಾಯಿತು ಇಂದು ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಾದ ಸಂದರ್ಭ ಬಂದು ಒದಗಿದೆ ಸಹನೆ ಧೈರ್ಯ,
ತಾಳ್ಮೆಯಿಂದ ಒತ್ತಡದ ಪರಿಸ್ಥಿತಿ ನಿಭಾಯಿಸಿದಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಜಿಲ್ಲಾಧ್ಯಕ್ಷರಾದ
ಶ್ರೀಮತಿ ಶಾರದಾ ಆರ್‌ಎಸ್ ರವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ಶಿಕ್ಷಣ ಬರಿ ಪಠ್ಯಪುಸ್ತಕದ ಜ್ಞಾನವಲ್ಲ
ಬದಲಾಗಿ ಮೌಲ್ಯಯುತ ಶಿಕ್ಷಣ ನೀಡದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸಲು ಶಿಕ್ಷಕರು ಹೆಚ್ಚಿನ ಜವಾಬ್ದಾರಿಯನ್ನು
ವಹಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಸ್ಥೆಯ ಅಧ್ಯಕ್ಷರಾದ ಬಿ ಶಿವರಾಂ ಶೆಟ್ಟಿ ಅಭಿಪ್ರಾಯಪಟ್ಟರು
ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕರನ್ನ ಗೌರಿಸಲಾಯಿತು
ಸಿಸ್ಟರ್ ರಿಜಿನಾ ಮೇರಿ ಶ್ರೀಯುತ ಅಣ್ಣೇಗೌಡ, ಸಿಸ್ಟರ್ ಮೋಲಿ,ಶ್ರೀಮತಿ ಜೆಪಿ ಇಂದ್ರಮ್ಮ ಇವರಿಗೆ
ಜಿಲ್ಲಾ ಉತ್ತಮ ಪ್ರಶಸ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು, ಇದೆ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ
ನಿವೃತ್ತಿ ಹೊಂದಿದಂತ ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಭೆಯಲ್ಲಿ ಗೌರವಿಸಲಾಯಿತು,
ಕಾರ್ಯಕ್ರಮದಲ್ಲಿ ಶ್ರೀಯುತ ಸತೀಶ್ ಶ್ರಿಯುತ ಜಗದೀಶ್ ಜಿ ಸಿ, ಸುಬ್ರಾಯ್ ಗೌಡ್ರು ಎಪಿ ರಾಮಚಂದ್ರಗೌಡ ಬಿಪಿ ನಿಂಗಪ್ಪ,ರವಿನಾಯ್ಕ್ ಉಪಸ್ಥಿತರಿದ್ದರು, ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮುಖ್ಯೋಪಾಧ್ಯಾಯರು ಶಿಕ್ಷಕರು ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.

No comments:
Post a Comment