ಕರ್ನಾಟಕ ಗ್ರೋವರ್ಸ್
ಫೆಡರೇಷನ್ (ರಿ.) ವತಿಯಿಂದ ಹದಿನಾಲ್ಕನೇ ಮಾಸಿಕ ಸಭೆ ಫೆಡರೇಷನ್ ಅಧ್ಯಕ್ಷರಾದ ಹೆಚ್.ಬಿ. ಶಿವಣ್ಣ
ಹಳಸೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಗ್ಗೆ
11 ಗಂಟೆಗೆ ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಕಾಫಿ ಭವನ ಸಭಾಂಗಣದಲ್ಲಿ ನಡೆಯಿತು. ಈ ಸಭೆ ಮೂಡಿಗೆರೆ
ತಾಲೂಕು ಬೆಳೆಗಾರರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ
ಹಣಕಾಸು ಸಂಬಂಧಿತ ವಿಷಯಗಳು ಹಾಗೂ ಮುಖ್ಯವಾದ ಪತ್ರ ವ್ಯವಹಾರಗಳ ಕುರಿತು ಚರ್ಚೆ ನಡೆಯಿತು. ಕಾಡಾನೆ
ಸಮಸ್ಯೆ ಹಾಗೂ ಸರ್ಫಾಸಿ (SARFAESI) ವಿಚಾರವಾಗಿ ಕರ್ನಾಟಕ ಗ್ರೋವರ್ಸ್ ಫೆಡರೇಷನ್ ನಿಯೋಗವು ದೆಹಲಿಗೆ
ಭೇಟಿ ನೀಡಿ ನಡೆಸಿದ ಮಾತುಕತೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇದೇ ವೇಳೆ
ಇಂಡಿಯಾ ಇಂಟರ್‌ನ್ಯಾಷನಲ್ ಕಾಫಿ ಫೆಸ್ಟಿವಲ್ (IICF) ನಲ್ಲಿ ಭಾಗವಹಿಸಿದ ಕುರಿತು ಮತ್ತು ಸರ್ಫಾಸಿ
ಸಮಸ್ಯೆಗಳ ಬಗ್ಗೆ ನಡೆಸಿದ ಚರ್ಚೆಗಳನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ವಿದ್ಯುತ್ ಪಂಪ್‌ಸೆಟ್
ಸಮಸ್ಯೆ ಕುರಿತು ರಾಜ್ಯ ಇಂಧನ ಸಚಿವರು ಆಹ್ವಾನಿಸಿದ್ದ ಸಭೆಯಲ್ಲಿ ಭಾಗವಹಿಸಿದ ವಿಚಾರವನ್ನೂ ವಿವರಿಸಲಾಯಿತು.
ಮೂಡಿಗೆರೆ
ತಾಲೂಕು ಬೆಳೆಗಾರರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ ಕೃಷಿ ಮತ್ತು ಪ್ಲಾಂಟೇಷನ್ ಮೇಳ ಆಯೋಜಿಸುವ
ಕುರಿತು ಚರ್ಚೆ ನಡೆಯಿತು. ಏಪ್ರಿಲ್, ಮೇ ತಿಂಗಳಿನಲ್ಲಿ
ಕಾರ್ಯಕ್ರಮ ಆಯೋಜಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ಸಭೆಯನ್ನು
ಉದ್ದೇಶಿಸಿ ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಕೆಜಿಎಫ್ ಕಾರ್ಯದರ್ಶಿ ಸುರೆಂದ್ರ, ಮೂಡಿಗೆರೆ ತಾಲೂಕು ಬೆಳೆಗಾರರ
ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಯು. ರತೀಶ್, ಕೆ.ಜಿ.ಎಫ್. ಮಾಜಿ ಅಧ್ಯಕ್ಷ
ಬಿ.ಎಸ್. ಜಯರಾಂ, ಮನೋಹರ್ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ
ವಿವಿಧ ತಾಲ್ಲೂಕುಗಳ ಬೆಳೆಗಾರರ ಸಂಘದ ಅಧ್ಯಕ್ಷರು,
ಕೆ.ಜಿ.ಎಫ್. ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೂಡಿಗೆರೆ ಅರಣ್ಯ ಇಲಾಖೆಯ ಎಸಿಎಫ್ ಆದರ್ಶ್ ಅವರು ಕಾಡಾನೆ
ಹಾವಳಿಯ ಬಗ್ಗೆ ಬೆಳೆಗಾರರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ನೂರಾರು ಬೆಳೆಗಾರರು ಭಾಗವಹಿಸಿದ್ದರು.
No comments:
Post a Comment