ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ; ಆಧುನಿಕ ದಿನಮಾನಗಳಲ್ಲಿ ಟೈಲರ್ ವೃತ್ತಿ ಬಾಂಧವರ ಬದುಕು ಬಹಳ ಸಂಕಷ್ಟದಲ್ಲಿದೆ ಹೊಲಿಗೆಯ ಕಡೆ ಆಸಕ್ತಿ ಕಡಿಮೆಯಾಗಿದೆ ರೆಡಿಮೇಡ್ ಬಟ್ಟೆಗಳ ಆಕರ್ಷಣೆಯಿಂದ ವೃತ್ತಿ ಬದುಕಿಗೆ ಸಂಕಷ್ಟ ಎದುರಾಗಿದೆ ಎಲ್ಲರೂ ಒಗ್ಗಟ್ಟಾಗಿ ಮುಂದುವರೆದು ವೃತ್ತಿಯನ್ನು ಕಾಪಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ. ಉದ್ಘಾಟನೆಯನ್ನು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಬಾಳೂರು ನೆರವೇರಿಸಿ ಮಾತನಾಡಿ ; ಟೈಲರ್ ವೃತ್ತಿ ಒಂದು ಶ್ರೇಷ್ಠವಾದ ಕೆಲಸ. ವ್ಯಕ್ತಿಯನ್ನು ಅಂದವಾಗಿ ಕಾಣುವಂತೆ ವಸ್ತ್ರಗಳನ್ನು ಹೊಲಿದು ಕೊಡುವ ಟೈಲರ್ ಗಳು ಒಂದು ರೀತಿಯಲ್ಲಿ ಸಮಾಜ ಸೇವಕರು. ಮೂಡಿಗೆರೆ ಟೈಲರ್ ಸಂಘವು ಕೇವಲ ವೃತ್ತಿಗೆ ಸೀಮಿತವಾಗದೇ, ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಟೈಲರ್ ವೃತ್ತಿಬಾಂಧವರಿಗೆ
ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ನಗರ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಮಾಶಂಕರ ವಹಿಸಿದದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಮತ್ತು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಿವಗೌಡ್ರು, ಸತೀಶ್, ಗಿರೀಶ್, ಗೋಪಾಲ ಶೆಟ್ಟಿ, ಷಣ್ಮುಖಾನಂದ, ಪ್ರಕಾಶ್, ಮಂಜುಳಾ, ಮಂಜು, ಎಂಎಸ್ ನಾಗರಾಜ್, ಸುರೇಶ್ ಮತ್ತು ಟೈಲರ್ ವೃತ್ತಿ ಬಾಂಧವರು ಉಪಸ್ಥಿತರಿದ್ದರು



No comments:
Post a Comment