ಅವರು ಭಾನುವಾರ
ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ವರ್ತಕರ ಭವನದಲ್ಲಿ ವೈಭವ, ಐಶ್ವರ್ಯ, ಸಂಪತ್ತು, ಸಿರಿ ಮಹಾಸಂಘ
ಗೋಣಿಬೀಡು ವಲಯದಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಗೆ ಶಿಕ್ಷಣ
ಎಂಬುದು ಬಹುಮುಖ್ಯವಾಗಿದೆ. ಶಿಕ್ಷಿತ ಮಹಿಳೆ ತನ್ನ ಸಂಸಾರಕ್ಕೆ ಮತ್ತು ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ
ಕಾರ್ಯನಿರ್ವಹಿಸಬಲ್ಲಳು. ಅಡುಗೆ ಮನೆಯಿಂದ ಹಿಡಿದು ಅಂತರಿಕ್ಷದವರೆಗೆ ಮಹಿಳೆ ಇಂದು ವೈವಿದ್ಯಮಯ ಕ್ಷೇತ್ರಗಳಲ್ಲಿ
ಉನ್ನತ ಸಾಧನೆ ಮಾಡುತ್ತಿದ್ದಾಳೆ. ಆತ್ಮವಿಶ್ವಾಸ, ದೃಡಸಂಕಲ್ಪದಿಂದ ಮುನ್ನಡೆದರೆ ಯಾವುದೇ ಯಾವುದೂ
ಅಸಾಧ್ಯವಲ್ಲ. ಗ್ರಾಮೀಣ ಮಹಿಳೆಯರು ಕೀಳರಿಮೆ ಬಿಟ್ಟು
ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಸಂಘಸಂಸ್ಥೆಗಳ ಮೂಲಕ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು
ಎಂದರು.
ಮಾನವ ಹಕ್ಕುಗಳ ಆಯೋಗ ಬೆಂಗಳೂರು ನಾಮ ನಿರ್ದೇಶಿತ ಸದಸ್ಯೆ ಡಾ. ಇಸಬೆಲ್ಲ
ಝೇವಿಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ;
ಹೆಣ್ಣು ಎಲ್ಲ ಕಾರ್ಯದಲ್ಲೂ ಸಹಕಾರಿಯಾಗುವಳು, ಶತಮಾನಗಳ ಕಾಲ ಮಹಿಳೆಯನ್ನು
ಎರಡನೇ ದರ್ಜೆಯ ಪ್ರಜೆಯಾಗಿ ಕಾಣಲಾಗಿತ್ತು. ಆದರೆ ತನ್ನ ಪ್ರತಿಭೆಯ ಮೂಲಕ ಮಹಿಳೆ ದೌರ್ಜನ್ಯದ ಸಂಕೋಲೆಯನ್ನು
ಕಿತ್ತೊಗೆದು ಮುಖ್ಯವಾಹಿನಿಯಲ್ಲಿ ಸಕ್ರಿಯಳಾಗಿದ್ದಾಳೆ ಎಂದರು.
ಇಂಚರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸಫಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ; ಮಹಿಳೆಯರ
ಜೀವನದಲ್ಲಿ ಹಲವಾರು ಅಡೆತಡೆಗಳು ಎದುರಾಗುತ್ತವೆ.
ಮುಕ್ತ ಸಮಾಲೋಚನೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ತಮಗಾಗುವ ದೌರ್ಜನ್ಯಕ್ಕೆ ಸಂಬಂಧಪಟ್ಟ ಇಲಾಖೆಯ ಮೂಲಕ ದೂರು ಸಲ್ಲಿಸಿ ಪರಿಹಾರವನ್ನು
ಕಂಡುಕೊಳ್ಳಬಹುದು, ಸಾಮಾಜಿಕ ಜಾಲತಾಣಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು
ಎಂದರು.
ಕಾರ್ಯಕ್ರಮದಲ್ಲಿ ಚುನಾಯಿತ ಮಹಿಳಾ ಜನಪ್ರತಿನಿಧಿಗಳ ಒಕ್ಕೂಟದ ಸಂಯೋಜಕ ನವೀನ್ ಆನೆದಿಬ್ಬ, ಐಶ್ವರ್ಯ ಮಹಾ ಸಂಘದ ಅಧ್ಯಕ್ಷೆ ಶ್ರೀಮತಿ ಬುಷ್ರಾ, ಸಿರಿ ಮಹಾಸಂಘದ ಅಧ್ಯಕ್ಷೆ ಐವಿನ್ ಪಿಂಟೋ, ಸಂಪತ್ತು ಮಹಾಸಂಘದ ಅಧ್ಯಕ್ಷೆ ಶುಭ, ಚಿನ್ನಿಗ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತರುಣಂ ಬಾನು, ವಿಮುಕ್ತಿ ಸಂಸ್ಥೆಯ ಸಂಯೋಜಕ ಅರುಣ್ ಲೋಬೊ, ವೈಭವ ಸಂಘದ ಅಧ್ಯಕ್ಷರು ಶ್ರೀಮತಿ ಸಫಿಯ, ಕಾರ್ಯದರ್ಶಿ ವೀಣಾ, ಒಕ್ಕೂಟದ ಕಾರ್ಯದರ್ಶಿ ಝರೀನಾ, ಧರ್ಮಾವತಿ ಮುಂತಾದವರು ಇದ್ದರು . ಹೆಲೆನ್ ಸ್ವಾಗತಿಸಿ, ಝರೀನಾ ವಂದಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

No comments:
Post a Comment