Friday, 6 March 2026

ಯುವಕರ ಭವಿಷ್ಯ ಕಸಿದುಕೊಳ್ಳುವ ಬಜೆಟ್ : ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್

ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ರೈತರಿಗೆ ಆಶಾದಾಯಕ ಯೋಜನೆಗಳಿಲ್ಲ, ಯುವಕರಿಗೆ ಉದ್ಯೋಗದ ಭರವಸೆ ಇಲ್ಲ. ಇದು ಕೇವಲ ಅನ್ನಭಾಗ್ಯದ ಹೆಸರಿನಲ್ಲಿ ಯುವಕರ ಭವಿಷ್ಯ ಭಾಗ್ಯವನ್ನು ಕಸಿದುಕೊಳ್ಳುವ ಬಜೆಟ್ ಆಗಿದೆ ಎಂದು ಎಂದು ಬಿಜೆಪಿ ಯುವ ಮೋರ್ಚಾ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ ಕಿಡಿಕಾರಿದ್ದಾರೆ.

ಶುಕ್ರವಾರ ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಬಜೆಟ್ ಕೇವಲ ಚುನಾವಣಾ ಗಿಮಿಕ್ ಆಗಿದ್ದು, ರಾಜ್ಯದ ಯುವಜನತೆಯ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದರೂ, ಹೊಸ ಉದ್ಯೋಗ ಸೃಷ್ಟಿಯ ಬಗ್ಗೆ ಬಜೆಟ್ ನಲ್ಲಿ ಯಾವುದೇ ಸ್ಪಷ್ಟವಾದ ದಿಕ್ಸೂಚಿ ಇಲ್ಲ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯುವಜನಸ್ನೇಹಿ ಯೋಜನೆಗಳಿಗೆ ಈ ಸರ್ಕಾರ ಎಳ್ಳು- ನೀರು ಬಿಟ್ಟಿದೆ

ಕೇವಲ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಿರುವ ಸರ್ಕಾರ, ಮೂಲಸೌಕರ್ಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದೆ. ನಮ್ಮ ಜಿಲ್ಲೆಯ ನೀರಾವರಿ, ರಸ್ತೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ಮೀಸಲಿಡದಿರುವುದು ಖಂಡನೀಯ.

ಅಭಿವೃದ್ಧಿ ಶೂನ್ಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು, ರಾಜ್ಯವನ್ನು ಸಾಲದ ಸುಳಿಗೆ ದೂಡು ತ್ತಿದ್ದಾರೆ. ಇದು ಮುಂದಿನ ಪೀಳಿಗೆಯ ಮೇಲೆ ದೊಡ್ಡ ಆರ್ಥಿಕ ಹೊರೆಯಾಗಲಿದೆ. ಈ ಬಜೆಟ್‍ನಲ್ಲಿ ರೈತರಿಗೆ ಆಶಾದಾಯಕ ಯೋಜನೆಗಳಿಲ್ಲ, ಯುವಕರಿಗೆ ಉದ್ಯೋಗದ ಭರವಸೆ ಇಲ್ಲ. ಇದು ಕೇವಲ 'ಅನ್ನಭಾಗ್ಯ'ದ ಹೆಸರಿನಲ್ಲಿ ಯುವಕರ 'ಭವಿಷ್ಯ ಭಾಗ್ಯ'ವನ್ನು ಕಸಿದುಕೊಳ್ಳುವ ಬಜೆಟ್ ಆಗಿದೆ ಎಂದಿದ್ದಾರೆ.

No comments:

Post a Comment